ಉಡುಪಿ : ಕೊಡೇರಿ ನಾಡ ದೋಣಿ ದುರಂತ ಪ್ರಕರಣದಲ್ಲಿ ಕಾಣೆಯಾಗಿದ್ದವರ ಪೈಕಿ ಇನ್ನೂ ನಾಲ್ವರು ಮೀನುಗಾರರು ಈವರೆಗೂ ಪತ್ತೆಯಾಗಿಲ್ಲ. 39 ವರ್ಷದ ಶೇಖರ್ ಖಾರ್ವಿ, 55 ವರ್ಷದ ನಾಗ ಯಾನೆ ನಾಗರಾಜ್ ಖಾರ್ವಿ, 40 ವರ್ಷದ ಮುಂಜುನಾಥ ಖಾರ್ವಿ, 34 ವರ್ಷದ ಲಕ್ಷ್ಮಣ ಖಾರ್ವಿ ಇನ್ನೂವರೆಗೂ ನಾಪತ್ತೆಯಾಗಿದ್ದಾರೆ. ಇತ್ತ ಸಮುದ್ರ ಪ್ರಕ್ಷ್ಯುಬ್ದವಾದಕಾರಣ ರಾತ್ರಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಇಂದು ಮತ್ತೆ ಶೋಧಕಾರ್ಯ ಮುಂದುವರೆದಿದ್ದು, ಕರಾವಳಿ ಕಾವಲುಪಡೆ ಹಾಗೂ ಕೋಸ್ಟ್ ಗಾರ್ಡ್ ಟೀಂ ಕಾರ್ಯಾಚರಣೆಯಲ್ಲಿ ತೊಡಗಿವೆ. ಬೈಂದೂರು ತಾಲೂಕಿನ ಕಿರಿಮಂಜೇಶ್ಚರದ ಕೊಡೇರಿಯಲ್ಲಿ ಸಾಗರ್ ಶ್ರೀ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದಿತ್ತು. ಘಟನೆ ವೇಳೆ ದೋಣಿಯಲ್ಲಿ 12ಮೀನುಗಾರರು ಇದ್ದು, ಮೀನುಗಾರಿಕೆ ಮುಗಿಸಿ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.









