ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮನ್ಸೂರ್ ಖಾನ್ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಅರ್ಜಿ ವಜಾ ಮಾಡಲಾಗಿದೆ. ಈ ಹಿಂದೆ ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮನ್ಸೂರ್ ಖಾನ್ ಬಂಧನವಾಗಿತ್ತು. ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದಲ್ಲೂ ಜಾಮೀನು ಅರ್ಜಿ ವಜಾ ಆಗಿತ್ತು. ಕಳೆದ ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿರುವ ಮನ್ಸೂರ್ ಖಾನ್‍ಗೆ ಇದೀಗ ಮತ್ತೆ ಜೈಲೇ ಗತಿಯಾಗಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಮನ್ಸೂರ್ ಖಾನ್ ಅರ್ಜಿ ವಜಾಗೊಳಿಸುವ ಮೂಲಕ ಆತನ ನಿರೀಕ್ಷೆ ಹುಸಿಯಾಗಿಸಿದೆ ಸಿಬಿಐ ವಿಶೇಷ ಕೋರ್ಟ್. ಸಿಬಿಐ ಪರ ವಾದ ಮಂಡಿಸಿದ್ದ ಪಿಪಿ ಸುದರ್ಶನ್ ಅವರು ವಾದ ಮಂಡಿಸಿದ್ರು.









