ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮಹತ್ ಕಾರ್ಯಕ್ಕೆ ಅಸ್ಸಾಂ ಸಿಎಂ ಸರ್ಬನಂದ ಸೋನಾವಲ್ ಅವರು ಟ್ವೀಟ್ ಮೂಲಕ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇತ್ತೀಚೆಗೆ ಇಡೀ ಕೊರೊನಾ ಆತಂಕದ ನಡುವೆಯೇ ಪ್ರವಾಹದ ಕರಿಛಾಯೆ ಆವರಿಸಿಬಿಟ್ಟಿದೆ. 11 ಕ್ಕೂ ಹೆಚ್ಚು ರಾಜ್ಯಗಲ್ಲಿ ವರುಣನನ ರೌದ್ರನರ್ತನಕ್ಕೆ ಭೀಕರ ಪ್ರಹಾವ ಸೃಷ್ಟಿಯಾಗಿದೆ. ಅದರಲ್ಲೂ ಅಸ್ಸಾಂನಲ್ಲಿ ನದಿಗಳೆಲ್ಲಾ ಅಪಾಯದ ಮಟ್ಟ ಮೀರಿ ಹರಿದಿದ್ದು, ಹಲವಾರು ಜಿಲ್ಲೆಗಳೇ ನಡುಗಡ್ಡೆಯಾಗಿ ಮಾರ್ಪಾಡಾಗಿವೆ. ಇತ್ತ ಅದೆಷ್ಟೋ ಜನರ ಪ್ರಾಣ ಪಕ್ಷಿ ಹಾರಿ ಹೋಗಿದ್ದರೆ, ಗನಘೋರ ನೆರೆಗೆ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಲಕ್ಷಾಂತರ ಜನರ ಬದುಕು ಮುರಾಬಟ್ಟೆಯಾಗಿದೆ. ಇನ್ನೂ ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಶ್ರಮಿಸಿಉತ್ತಿರುವುದು ಒಂದೆಡೆಯಾದರೆ ಸೆಲೆಬ್ರಿಟಿಗಳು, ಸಮಾಜ ಸೇವಕರು ಸಂಘ ಸಂಸ್ಥೆಗಳು ಕೈಲಾದ ಸಹಾಯ ಮಾಡಿ ನೆರವಾಗಿವೆ.
ಆ ಸಾಲಿಗೆ ಸ್ಟಾರ್ ನಟ ಅಕ್ಷಯ್ ಕುಮಾರ್ ಕೂಡ ಸೇರಿದ್ದಾರೆ. ಹೌದು ಅಕ್ಷಯ್ ಪ್ರವಾಹ ಪೀಡಿತ ಅಸ್ಸಾಂ ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಹಾಗಾಗಿ ಅಸ್ಸಾಂ ಸಿಎಂ ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಸ್ಸಾಂನ ಮುಖ್ಯಮಂತ್ರಿಗಳು ಎಂತಹದ್ದೇ ಕಷ್ಟದ ಸಂದರ್ಭಗಲಲ್ಲೂ ಸ್ಪಂದಿಸಿ ಕಾಳಜಿ ವ್ಯಪಡಿಸುವ ನಿಮಗೆ ದೇವರು ಆಶೀರ್ವಾದ ಕರುಣಿಸಿ, ನಿಮ್ಮ ಕೀರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಹೆಚ್ಚಾಗಲಿ ಎಂದು ಹರಿಸಿದ್ದಾರೆ. ಇನ್ನೂ ಅಕ್ಷಯ್ ಕೇವಲ ಅಸ್ಸಾಂಗಷ್ಟೇ ಅಲ್ಲ ಪ್ರವಾಹದಿಂದ ತತ್ತರಿಸಿಹೋಗಿರುವ ಮತ್ತೊಂದು ರಾಜ್ಯವಾದ ಬಿಹಾರಕ್ಕೂ 1 ಕೋಟಿ ರೂಪಾಯಿ ದೇಣಿಗೆ ನೀಡಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.








