ಬೆಂಗಳೂರು: ಕೊರೊನಾ ಕಂಟೈನ್ಮೆಂಟ್ ಝೋನ್ಗಳ ನಿಯಮದಲ್ಲಿ ಹಲವು ಸಡಿಲೆಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಕಂಟೈನ್ಮೆಂಟ್ ಹಾಗೂ ಬಫರ್ ಝೋನ್ ಗಳಿಗೆ ಹೊಸದಾಗಿ ಪರಿಷ್ಕೃತ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಹೊರೆಡಿಸಿದೆ. ಪರಿಷ್ಕೃತ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ನೂತನ ಮಾರ್ಗಸೂಚಿ ಅನ್ವಯ ಇಷ್ಟು ದಿನಗಳ ವರೆಗೂ 28 ದಿನಗಳಿದ್ದ ಕಂಟೈನ್ಮೆಂಟ್ ಝೋನ್ಗಳ ಅವಯನ್ನು ಇದೀಗ 14 ದಿನಗಳಿಗೆ ಇಳಿಕೆ ಮಾಡಲಾಗಿದೆ. ಈ ಹಿಂದೆ 28 ದಿನಗಳಲ್ಲಿ ಕಂಟೈನ್ಮೇಂಟ್ ಝೋನ್ಗಳಲ್ಲಿ ಯಾವುದೇ ಪಾಸಿಟಿವ್ ವರದಿ ಬಾರದೇ ಇದ್ದಲ್ಲಿ ಝೋನ್ಗಳನ್ನು ತೆರವು ಮಾಡಬೇಕಿತ್ತು. ಆದರೆ ಇದೀಗ 14 ದಿನಗಳಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗದಿದ್ದರೆ ಕಂಟೈನ್ಮೆಂಟ್ ಝೋನ್ಗಳನ್ನು ತೆರವು ಮಾಡಬಹುದಾಗಿದೆ.
ಇನ್ನೂ ಯಾವುದೇ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡರೆ ಆತನ ಮನೆಯನ್ನು ಮಾತ್ರ ಪರಿಗಣಿಸಬೇಕು. ಸುತ್ತಮುತ್ತಲ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕುವ ಆವಶ್ಯಕತೆ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳಾದ ಜಾವೇದ್ ಅಖ್ತರ್ ಅವರು ವಿವರಿಸಿದ್ದಾರೆ.









