ಬಳ್ಳಾರಿ : ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಬಳ್ಳಾರಿಯ ಕೋವಿಡ್ ಸೆಂಟರ್ ನಲ್ಲಿ ವಿಭಿನ್ನ ಪ್ರಯತ್ನ ನಡೆಸಲಾಗಿದೆ. ಬಳ್ಳಾರಿ ಜಿಲ್ಲೆಯ ಟ್ರಾಮಾ ಕೇರ್ ಸೆಂಟರ್ ನಲ್ಲಿ ಸೋಂಕಿತರಿಗಾಗಿ ಮ್ಯೂಸಿಕಲ್ ಥೆರಿಫಿ ಶುರು ಮಾಡಲಾಗಿದೆ. ಅಂದರೆ ಸೋಂಕಿತರಿಗೆ ದೈಹಿಕ ಚಿಕಿತ್ಸೆಯ ಜೊತೆಗೆ ಮಾನಸಿಕ ಚಿಕಿತ್ಸೆಯ ಅಗತ್ಯ ಸಹ ಇದ್ದು, ಕೊರೊನಾ ಸೋಂಕಿತರಿಗೆ ಹಾಡು ಹಸೆಯ ಮೂಲಕ ಹೊಸ ಹುಮ್ಮಸ್ಸು ನೀಡಲು ಆರೋಗ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.
ಹೌದು ಯೋಗ,ಧ್ಯಾನ ಸಂಗೀತದ ಮೂಲಕ ರೋಗಿಗಳಿಗೆ ಒತ್ತಡ ನಿವಾರಿಸುವ ಕಲೆ ಕಲಿಸಿಕೊಡಲಾಗುತ್ತಿದ್ದು, ಸೋಂಕಿತರು ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋಗಳನ್ನು ಸ್ವತಃ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಹಂಚಿಕೊಂಡಿದ್ದಾರೆ.








