ಆರ್.ಬಿ.ಐ, ಯೆಸ್ ಬ್ಯಾಂಕ್ ನ ನಿರ್ದೇಶಕ ಮಂಡಳಿಯನ್ನು 30ದಿನಗಳ ಕಾಲ ತನ್ನ ಹಿಡಿತಕ್ಕೆ ತೆಗೆದುಕೊಂಡ ಕೆಲವೇ ಸಮಯದಲ್ಲಿ ಜಾರಿ ನಿರ್ದೇಶನಾಲಯ ಯೆಸ್ ಬ್ಯಾಂಕ್ ನ ಸ್ಥಾಪಕ ರಾಣಾ ಕಪೂರ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್ಎ) ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲು ಈ ದಾಳಿ ನಡೆಸಲಾಗಿದೆ.
ಬ್ಯಾಂಕ್ ನ ಆರ್ಥಿಕ ಬಿಕ್ಕಟ್ಟಿಗೆ ಬೇರೆ ಕಾರಣಗಳೊಂದಿಗೆ ಉನ್ನತ ಅಧಿಕಾರಿಗಳ ಅವ್ಯವಹಾರಗಳೂ ಕೂಡಾ ಕಾರಣ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿಕೆ ನೀಡಿದ್ದರು.
ರಾಣಾ ಕಪೂರ್ ಮತ್ತು ಇತರ ಆಡಳಿತ ನಿರ್ದೇಶಕರು ದೇಶ ಬಿಟ್ಟು ಹೋಗದಂತೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ.
ಮಾಜಿ ಎಸ್.ಬಿ.ಐ ಸಿ.ಎಫ್.ಒ ಪ್ರಶಾಂತ್ ಕುಮಾರ್ ಅವರನ್ನು ಬ್ಯಾಂಕಿನ ನಿರ್ವಾಹಕರಾಗಿ ನೇಮಿಸಲಾಗಿದೆ.








