ಬೆಂಗಳೂರು: ಲಾಕ್‍ಡೌನ್ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಾಲಿವುಡ್ ನಟ ಸುಶಾಂತ್‍ಸಿಂಗ್ ರಜಪೂತ್ ಪ್ರೇಯಸಿ ಡ್ರಗ್ಸ್ ಮಾಫಿಯಾ ಜತೆ ಲಿಂಕ್ ಹೊಂದಿರುವ ಶಂಕೆ ಶುರುವಾಗಿದೆ.
ಮುಂಬೈನ ಡ್ರಗ್ ಡೀಲರ್ ರೆಹಮಾನ್ ಜತೆ ಸುಶಾಂತ್ ಪ್ರೇಯಸಿ ರಿಯಾ ಸಂಪರ್ಕ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮುಂಬೈನಲ್ಲಿ ರೆಹಮಾನ್‍ನನ್ನು ಬಂಧಿಸಿದಾಗ ರಿಯಾಗೆ ಡ್ರಗ್ಸ್ ಸಪ್ಲೈ ಮಾಡಿರುವಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ಡ್ರಗ್ ಡೀಲರ್ ಅನಿಕಾ ಹಾಗೂ ಮುಂಬೈನ ರೆಹಮಾನ್ ಮದುವೆಯಾಗಿದ್ದರು. ರೆಹಮಾನ್ ಮುಂಬೈನಲ್ಲಿ ಕುಳಿತುಕೊಂಡು ಡ್ರಗ್ ಡೀಲ್ ಮಾಡುತ್ತಿದ್ದರೆ, ಅನಿಕಾ, ಬೆಂಗಳೂರಿನಲ್ಲಿ ಡ್ರಗ್ಸ್ ಜಾಲದ ವ್ಯವಹಾರ ನೋಡಿಕೊಳ್ಳುತ್ತಿದ್ದಳಂತೆ. ಹೀಗಾಗಿ ಮುಂಬೈ ಡೀಲರ್ ರೆಹಮಾನ್ ಜತೆ ರಿಯಾ ಸಂಪರ್ಕ ಹೊಂದಿರುವುದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.









