ಮಂಗಳೂರು: ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷರಾಗಿದ್ದ ಯು. ಗಂಗಾಧರ ಭಟ್ ನಿಧನರಾಗಿದ್ದಾರೆ. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಯು.ಗಂಗಾಧರ ಭಟ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮುಂಜಾನೆ ೫.೨೩ಕ್ಕೆ ನಿಧನರಾದರು.
ಯು. ಗಂಗಾಧರ ಭಟ್ ೪೩ ವರ್ಷಗಳ ಕಾಲ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಸತ್ಯಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಗಂಗಾಧರ್ ಭಟ್ ಅವರು ಮಡಿಯಾಲ ನಾರಾಯಣ ಭಟ್ ಜತೆಗೆ ಅಳಿಕೆ ಹಾಗೂ ಮುದ್ದೇನಹಳ್ಳಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದರು.
ತ್ಯಾಗ ಜೀವಿಯಾಗಿದ್ದ ಅವರು ೧೯೭೭ರಿಂದ ಇಲ್ಲಿಯವರೆಗೆ ಸುಮಾರು ೪೩ ವರ್ಷಗಳ ಕಾಲ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.









