ಚಿಕ್ಕಮಗಳೂರು : ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ವಿವಾದದ ಕುರಿತು ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು, ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಈಗ ಸಂಘರ್ಷದ ರೂಪ ಪಡೆದಿರುವುದು ದುರಾದೃಷ್ಟಕರ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದ ಹಿಂದೆ ರಾಜಕೀಯ ದುರ್ಬಳಕೆ ನಡೆದಿದೆ. ಅದೇ ಜನರು ಈ ರೀತಿ ದುರ್ಬಳಕೆ ಮಾಡಿಕೊಳ್ಳುವ ಸಂಚಿನ ಸಾಧ್ಯತೆ ಇದೆ. ಒಂದು ವೇಳೆ ಸಂಚು ರೂಪಿಸುವ ಹಂತದಲ್ಲಿದ್ರೆ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದರು.
ಸಂಗೊಳ್ಳಿರಾಯಣ್ಣ ಪ್ರತಿಮೆ ಆಗಲೇಬೇಕು. ಪ್ರತಿಮೆ ವಿವಾದ ಸ್ವರೂಪ ಪಡೆಯಬಾರದು. ರಾಯಣ್ಣ ಪ್ರತಿಮೆ ನಿರ್ಮಾಣವಾಗಲೇಬೇಕು. ಸಂಗೊಳ್ಳಿರಾಯಣ್ಣ ಹೆಸರು ಇಡೋದು ಹೆಮ್ಮೆಯ ವಿಷಯ ಏನೇ ಅಡೆತಡೆ ಇದ್ರು ಬಗೆಹರಿಸೋದಾಗಿ ಮುಖ್ಯಮತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.









