ಅದೆಷ್ಟೋ ಪಡ್ಡೆ ಹೈಕ್ಳ ನಿದ್ದೆ ಗೆಡಿಸಿರುವ ಹಾಟ್ ಬೆಡಗಿ ಅಂದ್ರೆ ಅದು ಸನ್ನಿ ಲಿಯೋನ್. ಸನ್ನಿ ಲಿಯೋನ್ ಹೆಸರು ಕೇಳ್ತಿದ್ದಂತೆ ಪಡ್ಡೆ ಹೈಕ್ಳ ಹುಬ್ಬೇರುತ್ತೆ. ಅಂತದ್ರಲ್ಲಿ ಖುದ್ದು ಸನ್ನಿ ಲಿಯೋನ್ ಹೆಸರೇ ಕಾಲೇಜಿನ ಮೆರಿಟ್ ಲಿಸ್ಟ್ ನಲ್ಲಿ ಕಂಡ್ರೆ ಹೇಗನ್ನಿಸುತ್ತೆ ಅಲ್ವಾ..!
ಇದೇನಪ್ಪಾ ಹೀಗ್ ಹೇಳ್ತಿದ್ದಾರೆ ಸನ್ನಿ ಅದ್ಯಾವಾಗ ನಟನೆ ಬಿಟ್ಟು ಕಾಲೇಜಿಗೆ ಹೋದ್ರು ಅಂದ್ಕೊಂಡ್ರಾ. ಖಂಡಿತ ಹಾಗೆ ಎಲ್ಲರಿಗೂ ಅನ್ನಿಸೋದು ಸಹಜ. ಇಂತದ್ದೇ ಆಶ್ಚರ್ಯಕ್ಕೆ ಒಳಗಾಗಿ ಒಂದು ಕ್ಷಣ ಡ್ರೀಮ್ ಲ್ಯಾಂಡ್ ಗೆ ಹೋಗಿ ಬಂದಿದ್ದಾರೆ ಕೊಲ್ಕತ್ತಾದ ಕಾಲೇಜಿನ ಹೈಕ್ಳು.
ಕೊಲ್ಕತ್ತಾದ ಆಶುತೋಷ್ ಕಾಲೇಜು , ಬಿಎ ಇಂಗ್ಲಿಷ್ ಕೋರ್ಸ್ ಪ್ರವೇಶಾತಿಗೆ ಬಿಡುಗಡೆ ಮಾಡಲಾಗಿದ್ದ ಪಟ್ಟಿಯಲ್ಲಿ ಟಾಪ್ ನಲ್ಲಿ ಇದ್ದದ್ದೂ ಬೇರೆ ಯಾರ ಹೆಸರೂ ಅಲ್ಲ. ಅದು ಸನ್ನಿ ಲಿಯೋನ್ ರದ್ದು. ಹಾಗಂತ ನೀವು ಆಶ್ಚರ್ಯ ಪಡಬೇಡಿ. ಯಾಕಂದ್ರೆ ಅಸಲಿಗೆ ಸನ್ನಿ ಕಾಲೇಜಿಗೆ ಹೋಗಿಲ್ಲ. ಯಾರೋ ಬೇಕಂತಲೇ ಇಂತಹ ಚೇಸ್ಟೆ ಮಾಡಿದ್ದಾರೆ ಅಷ್ಟೇ.!
ಇನ್ನೂ ಮೆರಿಟ್ ಪಟ್ಟಿಯಲ್ಲಿ ಸನ್ನಿ ಹೆಸರು ಕಂಡಿದ್ದೇ ತಡ ವಾವ್! ಸನ್ನಿ ನಮ್ಮ ಕಾಲೇಜಿನಲ್ಲಿ ಓದಲಿದ್ದಾರಾ ಅಂತ ಹೌಹಾರಿದ್ರು ಕಾಲೇಜ್ ಯುವಕರು. ಅಷ್ಟೇ ಅಲ್ಲ ಸನ್ನಿ ಹೆಸರಿನ ಜೊತೆಗೆ ರೋಲ್ ನಂ, ಐಡಿ ನಂ ಸಹ ನಮೂದಿಸಲಾಗಿತ್ತು.
ಮೆರಿಟ್ ಲಿಸ್ಟ್ ನಲ್ಲಿ ಹೆಸರು ನೋಡಿ ವಿದ್ಯಾರ್ಥಿಗಳಷ್ಟೇ ಅಲ್ಲ ಖುದ್ದು ಸನ್ನಿ ಸಾಕ್ ಆಗಿದ್ದಾರೆ. ಬಳಿಕ ಇದಕ್ಕೆ ಟ್ವೀಟ್ ಮೂಲಕ ಹಾಸ್ಯಭರಿತವಾಗಿ ಪ್ರತಿಕ್ರಿಯೆ ನೀಡಿರುವ ಸನ್ನಿ ಕಾಲೇಜಿನ ಮುಂದಿನ ಸೆಮಿಸ್ಟರ್ ನಲ್ಲಿ ಎಲ್ಲರಿಗೂ ಸಿಗುತ್ತೇನೆ ಎಂದಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ತಿಖೆ ನಡೆಸಿ , ಇದನ್ನು ಸರಿಪಡಿಸುವಂತೆ ಅಡ್ಮಿಷನ್ ವಿಭಾಗಕ್ಕೆ ತಿಳಿಸಿರುವುದಾಗಿ ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ. ಅಲ್ಲದೇ ಮೆರಿಟ್ ಲಿಸ್ಟ್ ನ ಸ್ಕ್ರೀನ್ ಶಾಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 








