ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾದ ಹೊಗೆಯಾಡುತ್ತಿರುವ ಬೆನ್ನಲ್ಲೇ ಚಂದನವನದ ತಾರೆಯೊಬ್ಬರು ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ. ಗಾಂಜಾ ತುಳಸಿಯಷ್ಟೇ ಪವಿತ್ರ , ದೇಶದಲ್ಲಿ ಗಾಂಜಾ ಮಾರಾಟವನ್ನು ಅಧಿಕೃತಗೊಳಿಸಬೇಕು ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ನಟಿ ನಿವೇದಿತಾ.
ಸಂದರ್ಶನವೊಂದರಲ್ಲಿ ಈ ಕುರಿತಾಗಿ ಮಾತನಾಡಿರುವ ನಟಿ ಗಾಂಜಾಗೆ ಸನಾತನ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ಅಲ್ಲದೇ ಇದನ್ನು ಆಯುರ್ವೇದ ಔಷಧಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ಗಾಂಜಾ ಮಾರಾಟವನ್ನು ಅಧಿಕೃತಗೊಳಿಸಬೇಕು ಎಂದಿದ್ದಾರೆ.
ಇಷ್ಟೆ ಅಲ್ಲ ನಮ್ಮಲ್ಲಿ ಗಾಂಜಾ ಮಾರಾಟಕ್ಕೆ ನಿರ್ಬಂಧ ಹೇರಿರುವ ಕಾರಣಕ್ಕೇ ಜನರು ಸಿಂಥೆಟಿಕ್ ಡ್ರಗ್ ಗಳ ದಾಸರಾಗುತ್ತಿದ್ದಾರೆ. ಗಾಂಜಾ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ದೇಶಗಳಲ್ಲಿ ಅಪರಾಧ ಪ್ರಮಾಣ ಕಡಿಮೆಯಿದೆ ಎಂದಿದ್ದಾರೆ. ಆದರೆ ನಿವೇದಿತಾ ಮೊಂಡು ಧೈರ್ಯದ ಹೇಳಿಕೆ ಸದ್ಯ ೀಗ ವಿವಾದಕ್ಕೆ ಗುರಿಯಾಗಿರುವುದಂತೂ ಸುಳ್ಳಲ್ಲ.








