ನಮ್ಮ ತಾಯಿಗೆ ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡಿ ಎದೆ ನೋವು ಕಾಣಿಸಿಕೊಂಡಿದೆ. ಅವರಿಗೆ ಏನಾದ್ರೂ ಆದ್ರೇ ಪ್ರಶಾಂತ್ ಸಂಬರಗಿ ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಸಂಜನಾ ಗಲ್ರಾನಿ ಪ್ರಶಾಂತ್ ಸಂಬರಗಿ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಸ್ಯಾಮಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟು ಕೇಳಿಬಂದಾಗಿನಿಂದಲೂ ಸಂಜನಾ ಹಾಗೂ ಪ್ರಶಾಂತ್ ಸಂಬರಗಿ ನಡುವಿನ ಕಚ್ಚಾಟ ಮುಂದುವರೆಯುತ್ತಲೇ ಬಂದಿದೆ. ಸಂಜಜಾ ವಿರುದ್ಧ ಸತತವಾಗಿ ಸಸಂಬರಗಿ ಆರೋಪಿಸುತ್ತಲೇ ಬಂದಿದ್ದು, ಸಂಜನಾ ಸಹ ತಿರುಗೆಟು ನೀಡುತ್ತಲೇ ಬಂದಿದ್ದಾರೆ. ಇಂದು ಸಹ ಸಂಬರಗಿ ವಿರುದ್ಧ ಕಿಡಿಕಾರಿದ ಸಂಜನಾ ನನಗಿನ್ನೂ ಮದುವೆಯೂ ಆಗಿಲ್ಲ. ನನ್ನು ಕ್ಯಾರೆಕ್ಟರ್ ಬಗ್ಗೆ ಮಾತನಾಡಲು ಪ್ರಶಾಂತ್ ಸಂಬರಗಿ ಯಾರು. ನನ್ನ ತಾಯಿ ಹಾರ್ಟ್ ಫೇಷೆಂಟ್. ಈಗಾಗಲೇ ಅವರಿಗೆ ಹೃದಯ ಸಂಬಂಧಿ ಚಿಕಿತ್ಸೆ ಕೂಡ ಕೊಡಿಸಲಾಗಿದೆ. ಪ್ರಶಾಂತ್ ಸಂಬರಗಿ ನನ್ನ ಬಗ್ಗೆ ಮಾತನಾಡುತ್ತಿರುವುದರಿಂದ ತಾಯಿ ಮನನೊಂದು ಏನಾದ್ರೂ ಆದ್ರೇ.. ಪ್ರಶಾಂತ್ ಸಂಬರಗಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದೇ ವೇಳೆ ಕ್ಯಾಸಿನೋ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸಂಬರಗಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಂಜನಾ ನಾನು ಕ್ಯಾಸಿನೋ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಹೋಗಿದ್ದೆ. ಅಲ್ಲಿ ವಿವೇಕ್ ಒಬೇರಾಯ್ ನನ್ನ ಪಕ್ಕದಲ್ಲಿಯೇ ನಿಂತಿದ್ದರು. ನಟ ಉಪೇಂದ್ರ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂತಹ ಕಾರ್ಯಕ್ರಮಕ್ಕೆ ಎಲ್ಲಾ ರಾಜ್ಯಗಳಿಂದ 200ಕ್ಕೂ ಹೆಚ್ಚು ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಊಹಾಪೋಹಗಳ ಸೃಷ್ಟಿಸಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.








