ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದಲ್ಲಿ ನನ್ನದೇನೂ ಪಾತ್ರ ಇಲ್ಲ, ನಾನು ಡ್ರಗ್ಸ್ ತೆಗೆದುಕೊಳ್ಳುವವರ ತರಹ ಕಾಣ್ತೀನಾ ಅಂತ ಮಾಧ್ಯಮ ಪ್ರತಿನಿಧಿಗಳನ್ನೇ ಪ್ರಶ್ನೆ ಮಾಡುತ್ತಿದ್ದ ಕಾಂಟ್ರೋವರ್ಸಿ ನಟಿ ಸಂಜನಾ ಗಲ್ರಾನಿ ಕೊನೆಗೂ ಸಿಸಿಬಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
ತಾನು ಪಾರ್ಟಿಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳುತ್ತಿರುವುದಾಗಿ ಸಿಸಿಬಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.
ಮೊದಲು ನನಗೇನೂ ಗೊತ್ತಿಲ್ಲ ಎಂದು ಕಣ್ಣೀರು ಹಾಕಿ ಡ್ರಾಮಾ ಮಾಡಿದ ಸಂಜನಾಗೆ ಪೊಲೀಸರು ಈಗಾಗಲೇ ಬಂಧಿತರು ನೀಡಿದ ಹೇಳಿಕೆಗಳನ್ನು ಮುಂದಿಡುತ್ತಿದ್ದಂತೆ ನಾನು ಡ್ರಗ್ಸ್ ತೆಗೆದುಕೊಂಡಿರುವುದು ನಿಜ. ನನ್ನ ಕರ್ಮ ಎಂದು ಕಣ್ಣೀರು ಹಾಕಿದ್ದಾಳೆ ಎಂದು ಮೂಲಗಳು ತಿಳಿಸಿವೆ.
24 ಜನರ ಹೆಸರು ಹೇಳಿದ್ರಾ ಸಂಜನಾ..!
ಪಾರ್ಟಿಗಳಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದಾಗಿ ತಪ್ಪೊಪ್ಪಿಕೊಂಡ ಸಂಜನಾ, 24 ಜನರ ಹೆಸರು ಹೇಳಿದ್ದಾಳೆ ಎನ್ನಲಾಗಿದೆ. ಸ್ಯಾಂಡಲ್ವುಡ್ನ ಇಬ್ಬರು ನಟರು, ನಟಿಯರು, ಬೆಂಗಳೂರಿನ ಮಾಜಿ ಶಾಸಕರ ಮಗ, ಕಿರುತೆರೆಯ ನಟ-ನಟಿಯರು ಹಾಗೂ ಕೋಟ್ಯಾಧಿಪತಿಗಳ ಮಕ್ಕಳು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಬಾಯ್ಬಿಟ್ಟಿದ್ದಾಳೆ.
ಡ್ರಗ್ಸ್ ತೆಗೆದುಕೊಳ್ಳುವುದು ನಾನೊಬ್ಳೆ ಅಲ್ಲ, ಡ್ರಗ್ಸ್ ರುಚಿಯನ್ನು ಬೇರೆಯವರಿಗೆ ತೊರಿಸಿದ್ದೇ ತಪ್ಪಾಯ್ತು, ನನ್ನ ಕರ್ಮ ಎಂದು ಸಂಜನಾ ಕಣ್ಣೀರು ಹಾಕಿ ಗೋಳಾಡಿದ್ದಾಳೆ.
ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ ನಟ-ನಟಿಯರು, ವಿವಿಐಪಿಗಳ ಜತೆ ಪಾರ್ಟಿ ಮಾಡಿದ್ದೇನೆ. ಸುಮಾರು 10 ಸಿನಿಮಾ ಮಾಡಿರುವ ಸ್ಟಾರ್ ನಟಿಯೊಬ್ಬಳ ಹೆಸರು ಹೇಳಿ ಅವಳನ್ನು ಅರೆಸ್ಟ್ ಮಾಡಿ ಎಂದು ಸಂಜನಾ ಸಿಸಿಬಿ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾಳೆ.
ರಾಗಿಣಿ, ಸಂಜನಾ ಬಳಿಕ ಸಿಸಿಬಿ ಪೊಲೀಸರ ಕೋಳ ಮುಂದೆ ಯಾರ ಕೈಗೆ ಬೀಳುತ್ತದೆ ಎಂದು ಸ್ಯಾಂಡಲ್ವುಡ್ ನಟ-ನಟಿಯರು, ರಾಜಕಾರಣಿಗಳ ಮಕ್ಕಳು ಸೇರಿದಂತೆ ಹಲವರಿಗೆ ನಡುಕ ಉಂಟು ಮಾಡಿದೆ. ಸಂಜನಾ ಕೊಟ್ಟಿರುವ ಲಿಸ್ಟ್ನಲ್ಲಿ ನಾವಿದ್ದೀವಾ ? ಒಂದು ವೇಳೆ ನಮ್ಮ ಹೆಸರು ಇದ್ದರೆ ಮುಂದೇನು ಎಂಬ ಚಿಂತೆ ಕಾಡಲು ಶುರುವಾಗಿದೆ.
ಸಿಸಿಬಿ ಪೊಲೀಸರು ತನಿಖೆ ಮಾಡಲಿ
ನನ್ನ ಮಗಳಿಗೆ ಏನೂ ಆಗಿಲ್ಲ, ದೇವರು ಒಳ್ಳೆಯದನ್ನೇ ಮಾಡುತ್ತಾನೆ. ಸಿಸಿಬಿ ಪೊಲೀಸರು ತನಿಖೆ ಮಾಡಲಿ, ಎಲ್ಲವೂ ಒಳ್ಳೆಯದಾಗುತ್ತೆ. ನನ್ನ ಮಗಳು ಆರೋಪದಿಂದ ಹೊರ ಬರ್ತಾಳೆ ಎಂದು ಸಂಜನಾ ಗಲ್ರಾನಿ ತಾಯಿ ರೇಷ್ಮಾ ಗಲ್ರಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಜನಾಳನ್ನು ಪೊಲೀಸರು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದಾಗ ಅವಳ ಜತೆಯಲ್ಲಿಯೇ ಬಂದಿದ್ದರು. ಸಂಜನಾ ಅರೆಸ್ಟ್ ಎಂದು ಪೊಲೀಸರು ಹೇಳುತ್ತಿದ್ದಂತೆ ಸಂಜನಾ ತಾಯಿ ಹಾಗೂ ತಂದೆ ಮನೆಯತ್ತ ಹೊರಟಿದ್ದಾರೆ. ಸಂಜನಾ ತಂದೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.