ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿಯನ್ನು ಭೇಟಿಯಾದ ಕೇಂದ್ರ ಸಚಿವ ರಾಮದಾಸ್ ಅಥಾವಾಲೆ
ಮುಂಬೈ, ಸೆಪ್ಟೆಂಬರ್12: ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಅವರು ಇಂದು ಮುಂಬೈನಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾದರು. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಮುಂಬೈನಲ್ಲಿನ ಕಂಗನಾ ರಣಾವತ್ ಅವರ ಕಚೇರಿಯನ್ನು ನೆಲಸಮಗೊಳಿಸಿದ ವಿಚಾರದಲ್ಲಿ ನಾನು ಇಂದು ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿಯಾದೆ ಮತ್ತು ನಷ್ಟಕ್ಕೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದ್ದೇನೆ. ಬಿಎಂಸಿ ಅವರ ಕಚೇರಿಯನ್ನು ನೆಲಸಮಗೊಳಿಸಿದ ವಿಧಾನ ತಪ್ಪಾಗಿದೆ. ಆಕೆಗೆ ನ್ಯಾಯ ಸಿಗಬೇಕು ಎಂದು ಅಥಾವಾಲೆ ಹೇಳಿದ್ದಾರೆ.
ಗುರುವಾರ ಆರ್ಪಿಐ ಅಧ್ಯಕ್ಷ ಅಥಾವಾಲೆ ನಟ ಕಂಗನಾ ರಣಾವತ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಲು ತೆರಳಿದ್ದರು.
ಬುಧವಾರ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ತೆರವು ಕಾರ್ಯಾಚರಣೆ ವೇಳೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿಯ ಹಲವು ಭಾಗಗಳಿಗೆ ತೀವ್ರ ಹಾನಿಯಾಗಿದೆ.
ನಟಿ ಕಂಗನಾ ರನೌತ್ಗೆ ಬೆದರಿಕೆ ಹಾಕಿದ್ದ ಮತ್ತು ಮುಂಬೈಗೆ ಹಿಂತಿರುಗಬಾರದೆಂದು ಕೇಳಿದ್ದಕ್ಕಾಗಿ ಈ ಹಿಂದೆ ಅಥಾವಾಲೆ ರಾಜ್ಯಸಭೆಯಲ್ಲಿ ಶಿವಸೇನೆ ಸಂಸದ ಸಂಜಯ್ ರೌತ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
https://twitter.com/ANI/status/1304315551574040578?s=19








