2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ ಜರ್ಮನಿಯ ಲೌರಾ ಸೆಗ್ಮೆಂಡ್ ಮತ್ತು ರಷ್ಯಾದ ವೆರಾ ಝಿವೊನರೆವಾ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಲೌರಾ ಮತ್ತು ವೆರಾ ಜೋಡಿ 6-4, 6-4 ನೇರ ಸೆಟ್ ಗಳಿಂದ ಮೂರನೇ ಶ್ರೇಯಾಂಕಿತೆ ಜೋಡಿಯಾಗಿರುವ ಅಮೆರಿಕಾದ ನಿಕೊಲ್ ಮೆಲಿಚಾರ್ ಮತ್ತು ಚೀನಾದ ಯಿಫಾನ್ ಕ್ಸು ಜೋಡಿಯನ್ನು ನೇರ ಸೆಟ್ ಗಳಿಂದ ಪರಾಭವಗೊಳಿಸಿತು.
ಟೂರ್ನಿಯಲ್ಲಿ ಶ್ರೇಯಾಂಕ ರಹಿತವಾಗಿ ಕಣಕ್ಕಿಳಿದಿದ್ದ ಲೌರಾ ಮತ್ತು ವೆರಾ ಜೋಡಿಯು ಅದ್ಭುತ ಆಟವನ್ನೇ ಪ್ರದರ್ಶಿಸಿದ್ರು. ಹೊಂದಾಣಿಕೆಯ ಆಟದ ಬುದ್ಧಿವಂತಿಕೆಯ ಆಟದ ಮೂಲಕವೂ ಗಮನ ಸೆಳೆದ್ರು. ಈ ಗೆಲುವು ಸಂತಸವನ್ನು ತಂದಿದೆ. ಅದ್ರಲ್ಲೂ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ ಅಂತ ಲೌರಾ ಗೆಲುವಿನ ಬಳಿಕ ಹೇಳಿಕೊಂಡಿದ್ದಾರೆ. ಅಂದ ಈ ಜೋಡಿ ಗೆದ್ದಿರುವ ಮೊದಲ ಗ್ರ್ಯಾಂಡ್ ಪ್ರಶಸ್ತಿಯಾಗಿದೆ.
https://youtu.be/pBfvuudmGeM








