ಚೀನಾದಲ್ಲಿ ಹುಟ್ಟಿ ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾದಿಂದಾಗಿ ಜನರು ಬೇರೆಯವರೊಂದಿಗೆ ಹ್ಯಾಂಡ್ ಶೇಕ್ ಮಾಡುವುದಕ್ಕೂ ಯೋಚಿಸುವಂತಾಗಿದೆ. ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಹ ಹ್ಯಾಂಡ್ ಶೇಕ್ ಬದಲಾಗಿ ನಮಸ್ತೆ ಎಂದು ವಿಷ್ ಮಾಡುವ ಟ್ರೆಂಡ್ ಆರಂಭವಾಗಿದೆ.
ಭಾರತಕ್ಕೂ ಕೊರೊನಾ ಎಂಟ್ರಿ ಕೊಟ್ಟಿದ್ದು, ಯಾರೂ ಹ್ಯಾಂಡ್ ಶೇಕ್ ಮಾಡಬೇಡಿ. ಬದಲಾಗಿ ನಮಸ್ತೆ ಎಂದು ವಿಷ್ ಮಾಡಿ ಎಂದು ಪ್ರಧಾನಿ ಮೋದಿ, ಹಿರಿಯ ನಟ ಅನುಪಮ್ ಖೇರ್ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈಗ ದೇಶಿಗರು ಮಾತ್ರವಲ್ಲದೆ ವಿದೇಶಿಯರೂ ಕೂಡ ನಮಸ್ತೆ ಎಂದು ನಮಸ್ಕರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇಸ್ರೇಲ್ ನಲ್ಲಿಯೂ ಸಹ ಕರೊನಾ ವೈರಸ್ ರುದ್ರನರ್ತನ ಮಾಡುತ್ತಿದ್ದು, ಇಸ್ರೇಲ್ ನ ಜನರು ಹ್ಯಾಂಡ್ ಶೇಕ್ ನ ಬದಲು ನಮಸ್ತೆ ಹೇಳಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಸೂಚಿಸಿದ್ದಾರೆ.








