ADVERTISEMENT
Thursday, September 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಚಂದನವನದ ”ಯಜಮಾನರಿಗೊಂದು ಅಕ್ಷರ ನಮನ

admin by admin
September 18, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಕೋಟಿಗೊಬ್ಬನ ನೆನಪಲ್ಲಿ ಆದರ್ಶ ದಿನಾಚರಣೆ

ಹಾವಿನ ದ್ವೇಷ ಹನ್ನೆರುಡು ವರ್ಷ ಎಂಬ ನಾಗರಹಾವು ಚಿತ್ರದ ಹಾಡು ಕೇಳಿದ್ರನೇ ಆರು ವರ್ಷದ ಮಕ್ಕಳಿಂದ ಆರವತ್ತಾರರ ವೃದ್ಧರು ಸಹಾ ಎದೆಯುಬ್ಬಿಸಿ ನಿಲ್ಲುತ್ತಾರೆ. ಇಂತಹ ಸಾರ್ವಕಾಲಿಕ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ಮರೆಯದ ಮಾಣಿಕ್ಯ, ಸಹಾಸ ಸಿಂಹ ಡಾ. ವಿಷ್ಣುವರ್ಧನ್. ಅಭಿನಯ ಭಾರ್ಗವ, ಮೈಸೂರು ರತ್ನ ಎಂಬ ಬಿರುದಾಂಕಿತ ವಿಷ್ಣುವರ್ಧನ್ ಅವರಿಗೆ ಇಂದು 70ನೇ ಜನ್ಮದಿನದ ಸಂಭ್ರಮ.. ಭೌತಿಕವಾಗಿ ವಿಷ್ಣು ಇಲ್ಲದಿದ್ದರು ಇಂದು ಅವರ ಹೆಸರಿನಲ್ಲಿ ಆದರ್ಶ ದಿನಾಚರಣೆ, ಸಸಿ ನೆಡುವುದು, ರಕ್ತದಾನ, ಅನ್ನದಾನ, ಆರೋಗ್ಯ ಶಿಬಿರಗಳ ಮೂಲಕ ಇಂದು ವಿಷ್ಣು ಉತ್ಸವ ನಡೆಯುತ್ತಿದೆ.

ಪಂಚಭಾಷೆಗಳಲ್ಲಿ ಒಟ್ಟು 220 ಚಿತ್ರಗಳಲ್ಲಿ ನಟಿಸಿದ ವಿಷ್ಣದಾದಾ ಜನಿಸಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 1950ನೇ ಇಸವಿಯ ಸೆಪ್ಟೆಂಬರ್ 18ರಂದು. ಚಿತ್ರ ಸಂಭಾಷಣೆಕಾರ ಹೆಚ್ ಎಲ್ ನಾರಾಯಣರಾವ್ ಹಾಗೂ ಕಾಮಾಕ್ಷಮ್ಮನವರ ಮುದ್ದಿನ ಮಗ ಸಂಪತ್ ಕುಮಾರ್ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿ, ಕಾಲೇಜು ಶಿಕ್ಷಣಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಸೇರಿದರು.

Related posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

September 24, 2026
ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

September 24, 2026

ತಮ್ಮ ಐದನೇ ವಯಸ್ಸಿನಲ್ಲೇ ಶಿವರಣೆ ನಂಬೆಯಕ್ಕ ಮೂಲಕ ಬಣ್ಣ ಹಚ್ಚಿದ ಸಂಪತ್ ಕುಮಾರ್, ಬಳಿಕ ಗಿರಿಶ್ ಕಾರ್ನಾಡರ ವಂಶವೃಶದ ಮೂಲಕ ಗಮನ ಸೆಳೆದರು. ನ್ಯಾಯ ನಿಷ್ಠುರನಾದ ರಾಮಾಚಾರಿ ಪಾತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಸಂಪತ್ ಕುಮಾರನನ್ನು ವಿಷ್ಣುವರ್ಧನ್ ಎಂಬ ಹೆಸರಿನೊಂದಿಗೆ ನಾಗರಹಾವು ಮೂಲಕ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದಾರೆ

ವಿಷ್ಣುದಾದಾ ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿ ಕನ್ನಡಿಗರನ್ನು ರಂಜಿಸಿದ್ದಾರೆ.

ಸುಮಾರು 14 ಚಿತ್ರಗಳಲ್ಲಿ ದ್ವಿಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ದಾಖಲೆ ನಿರ್ಮಿಸಿದ್ದಾರೆ. ಅದರಲ್ಲೂ ಗೌಡರ ಗತ್ತಿನ ಸೂರ್ಯವಂಶ, ಸಿಂಹಾದ್ರಿಯ ಸಿಂಹ, ಜಮಿನ್ದಾರ್, ಹಾಗೂ ಆದರ್ಶನ ಅಣ್ಣನ ಪಾತ್ರದ ಯಜಮಾನನ್ನು ಕನ್ನಡಿಗರು ಎಂದೂ ಮರೆಯಲು ಸಾಧ್ಯವಿಲ್ಲ.

ಕನ್ನಡ ಚಿತ್ರರಂಗದ ದಿಗ್ಗಜನಟ ಡಾ. ವಿಷ್ಣುವರ್ಧನ್ ಅವರು ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿ ಕಲೆಗೆ ಭಾಷೆಯ ಗಡಿಯಿಲ್ಲ ಎನ್ನುವುದನ್ನು ಅಂದೇ ತೋರಿಸಿಕೊಟ್ಟರು. ಅಕ್ಷಯ್ ಕುಮಾರ್, ರಜಿನಿಕಾಂತ್, ಕಮಲ್ ಹಾಸನ್, ಮುಮ್ಮಟ್ಟಿ, ವಿಜಯ್ ಕಾಂತ್, ಶಿವಾಜಿ ಗಣೇಶನ್, ಕೃಷ್ಣಂ ರಾಜು, ರಾಜಶೇಖರ್ ಜೊತೆ ತೆರೆಹಂಚಿಕೊಂಡು ಪರಭಾಷೆಗಳಲ್ಲೂ ತಮ್ಮ ಸ್ನೇಹಲೋಕ ಸೃಷ್ಠಿಸಿಕೊಂಡಿದ್ದರು. ಅಲ್ದೆ ನಟ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ನಲ್ಲಿ ವಿಷ್ಣುದಾದಾ ಬಣ್ಣ ಹಚ್ಚಿ ಕಮಾಲ್ ಮಾಡಿದ್ದರು. ತಮ್ಮ ವಿವಿಧ ಚಿತ್ರದ ಅಭಿನಯಕ್ಕೆ ಒಟ್ಟು 7 ಫಿಲ್ಮ ಫೇರ್ ಪ್ರಶಸ್ತಿ ಪಡೆದಿದ್ದಾರೆ.

ತನ್ನದಲ್ಲದ ತಪ್ಪಿಗೆ ಕೆಲ ಕುತಂತ್ರಿಗಳು ಮಾಡಿದ ಸಂಚಿಗೆ ಬಲಿಯಾದ ವಿಷ್ಣುದಾದ ಗಂಧದಗುಡಿ ಪ್ರಕರಣದಲ್ಲಿ ಸಂಕಷ್ಟಗಳ ಸರಪಳಿಯನ್ನೇ ಎದುರಿಸಿದರು. ಈ ವೇಳೆ ವಿಷ್ಣುವರ್ಧನ್ ಜೊತೆ ನಿಂತದ್ದು ಅವರ ಕುಚುಕು ಗೆಳೆಯ ಅಂಬರೀಶ್ ಮತ್ತು ಅಭಿಮಾನಿಗಳು. ನಂತರ ಬಂಧನ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದ ಕರ್ನಾಟಕ ತೊರೆಯುವ ಯೋಚನೆ ಕೈಬಿಟ್ಟ, ಕನ್ನಡ ಮಣ್ಣನ್ನೇ ಹಣೆಯ ತಿಲಕ್ಕವನ್ನಾಗಿಸಿಕೊಂಡರು.

ಭೂತಯ್ಯನ ಮಗ ಅಯ್ಯು, ಕಾರ್ಮಿಕ ಕಳ್ಳನಲ್ಲ, ಊರಿಗೆ ಉಪಕಾರಿ, ಕರ್ಣ, ಕಥಾನಾಯಕ, ಕರುಣಾಮಯಿ, ದೇವಾ, ಧಣಿ, ಸೂರಪ್ಪ, ಕದಂಬ, ಕೋಟಿಗೊಬ್ಬ ಹೃದಯವಂತ ಚಿತ್ರಗಳ ಮೂಲಕ ವಿಷ್ಣು ಅದೇಷ್ಟು ಹತಾಶ ಮನಸುಗಳಿಗೆ ಆದರ್ಶ ಹಾಗೂ ಜೀವನೋತ್ಸಹ ತುಂಬಿದ್ದಾರೆ.

ಇನ್ನು ವಿಷ್ಣುವರ್ಧನ್ ಅವರ ಸಂಸಾರಿಕ ಜೀವನದ ಬಗ್ಗೆ ಹೇಳೋದಾದರೆ ಹೆಸರಾಂತ ಪಂಚಭಾಷನಟಿ ಭಾರತಿಯವರನ್ನು ಮದುವೆಯಾಗಿ, ಕೀರ್ತಿ, ಚಂದನ ಎಂಬ ದತ್ತು ಪತ್ರಿಯರ ಜೊತೆ ಆದರ್ಶ ಪ್ರಾಯ ಜೀವನ ನಡೆಸಿದ್ದಾರೆ.

ಇನ್ನು ಆರಂಭದ ನಾಗರಹಾವಿನಿಂದ ಅಂತ್ಯದ ಆಪ್ತರಕ್ಷದವರೆಗೂ ಯಶಸ್ಸು ವಿಷ್ಣು ಜೀವನದ ಜೊತೆ ಅಗತ್ಯ ಬಿದ್ದಾಗಲೆಲ್ಲ ಗಟ್ಟಿಯಾಗಿ ನಿಂತಿತ್ತು. ಆದರೆ ಅವರು 2009ರಂದು ಗತಿಸಿದ ಮೇಲೆ ಅವರ ಸ್ಮಾರಕದ ವಿಚಾರದಲ್ಲಿ ಚಿತ್ರರಂಗ ಮತ್ತು ಸರ್ಕಾರ ತಮ್ಮ ಸಹಜ ಗೌರವ ಸಲ್ಲಿಸಲು ಸಾಧ್ಯವಾಗಿಲ್ಲ. ಆದರೆ ಇಂದಿಗೂ ಅವರ ಅಭಿಮಾನಿಗಳು ಮಾತ್ರ ರಾಷ್ಟ್ರೀಯ ಉತ್ಸವದಂತ ಅದ್ದೂರಿ ಕಾರ್ಯಕ್ರಮಗಳು ಮಾತ್ರವಲ್ಲದೇ ಅನೇಕ ಅರ್ಥಪೂರ್ಣ ಕೆಲಸ ಮಾಡುತ್ತಿದ್ದಾರೆ.

ವೀರಪ್ಪನಾಯ್ಕ, ಮುತ್ತಿನಹಾರ, ವಿಷ್ಣುಸೇನಾದಂತಹ ದೇಶಾಭಿಮಾನ ಸಾರುವ ಚಿತ್ರದ ಮೂಲಕ ಸಂಪತ್ ಕುಮಾರ್ ಕನ್ನಡಿಗರ ಹೃದಯಮಂದಿರದಲ್ಲಿ ಸಾಹಸ ಸಿಂಹನಾಗಿ ಸಾದ ಜೀವಂತವಾಗಿದ್ದಾರೆ.

ಮಾನವೀಯ ಮೌಲ್ಯಗಳನ್ನೇ ಜೀವನದ ಉಸಿರಾಗಿಸಿಕೊಂಡು ಬದುಕಿದ “ಹೃದಯವಂತ”ನಿಗೆ ನಮ್ಮ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.. ನೀವು ಸಹಾ ಸಹಾಸಸಿಂಹನ ಜನ್ಮದಿನ ಸಂಭ್ರಮದಲ್ಲಿ ಭಾಗಿಯಾಗಬೇಕೆಂದರೆ ಕಮೆಂಟ್ ಮಾಡಿ ಕೋಟಿಗೊಬ್ಬನಿಗೆ ಶುಭಕೋರಿ.

✍ ಪ್ರತಾಪ್ ಕೋಟೆ

Tags: actorvishvardhanBirthdaykotigobbaNagarahavuRamacharisandalwoodactorvishnavardhan
ShareTweetSendShare
Join us on:

Related Posts

“ನಿಮ್ಮ ಸುಪ್ರೀಂ ಕೋರ್ಟ್ ಅನ್ನೇ ತೆಗೆದುಹಾಕುತ್ತೇನೆ” – ಯುಪಿ ಪೊಲೀಸ್ ದರ್ಪಕ್ಕೆ ಕೆಂಡಾಮಂಡಲವಾದ ಸರ್ವೋಚ್ಚ ನ್ಯಾಯಾಲಯ

ವಂದೇ ಮಾತರಂ ಹಾಡಲು ನಿರಾಕರಿಸಿದರೆ ದಂಡನಾತ್ಮಕ ಕ್ರಮವಿಲ್ಲ:ವಂದೇ ಮಾತರಂ ಎಷ್ಟು ಚರಣ ಇರಬೇಕೆಂದು ಸರ್ಕಾರ ನಿರ್ಧರಿಸಲಿ-ವ್ಯಕ್ತಿಯ ಆತ್ಮಸಾಕ್ಷಿಯ ಹಕ್ಕಿಗೆ ಸುಪ್ರೀಂ ಕೋರ್ಟ್ ಮಾನ್ಯತೆ

by Shwetha
September 24, 2026
0

ನವದೆಹಲಿ: ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಹಾಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಧಾರ್ಮಿಕ...

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

ವರ್ಗಾವಣೆ ಆದೇಶ ರದ್ದತಿಗೆ ಪ್ರಭಾವ ಬಳಸಿದರಾ ಇನ್ಸ್‌ಪೆಕ್ಟರ್? ಧನಂಜಯ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಸ್ನೇಹಮಯಿ ಕೃಷ್ಣ

by Shwetha
September 24, 2026
0

ಮೈಸೂರು: ಟಿ. ನರಸೀಪುರ ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ಅವರಿಗೆ ಈಗ ಹೊಸ ಕಾನೂನು ಸಂಕಷ್ಟ...

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

ಮಂಗಳೂರು ಸಂಪುಟ ಸಭೆ ಡಿಕೆ ಸರ್ಕಾರದ ಮಹಾ ನಾಟಕ: 32 ಸಾವಿರ ಕೋಟಿ ಘೋಷಣೆ ಕೇವಲ ಗಿಮಿಕ್ -ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನ ಬಿಚ್ಚಿಟ್ಟ ಸತೀಶ್ ಕುಂಪಲ

by Shwetha
September 24, 2026
0

ಮಂಗಳೂರು: ಕರಾವಳಿಯ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಕೇವಲ ಒಂದು ಪ್ರಹಸನ ಮತ್ತು ಜನರ ದಾರಿ ತಪ್ಪಿಸುವ ತಂತ್ರವಾಗಿದೆ ಎಂದು ದಕ್ಷಿಣ...

‘ವಂದೇ ಮಾತರಂ’ ಮೊದಲ ಎರಡು ಪ್ಯಾರಾಗಳಷ್ಟೇ ಹಾಡುತ್ತೇವೆ: ಬಿ.ಕೆ. ಹರಿಪ್ರಸಾದ್

ವಂದೇ ಮಾತರಂ ಬಾಯಿಪಾಠವೂ ಇಲ್ಲ, ಓದಿ ಹಾಡಲು ನಾಲಗೆಯೂ ಹೊರಳಲ್ಲ: ಬಿಜೆಪಿಗರ ದೇಶಪ್ರೇಮದ ಬಣ್ಣ ಬಯಲು -ಸುಪ್ರೀಂ ಕೋರ್ಟ್ ತೀರ್ಪು ಇವರಿಗೇ ರಿಲೀಫ್ ಅಂದಿದ್ದೇಕೆ ಹರಿಪ್ರಸಾದ್

by Shwetha
September 24, 2026
0

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ವಂದೇ ಮಾತರಂ ಗೀತೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಹೋದ ಬಿಜೆಪಿಗೆ ಈಗ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಚಾಟಿ ಬೀಸಿದ್ದಾರೆ. ಸರ್ಕಾರದ...

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್‌ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ

by Shwetha
September 24, 2026
0

ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram