ಸತ್ತ ವ್ಯಕ್ತಿಯೊಬ್ಬರ ಸಮಾಧಿ ಮಾಡಿದ ಬಳಿಕ ಕೇವಲ 1 ವಾರ 2 ವಾರಗಳಲ್ಲೇ ಅವರ ಮೃತದೇಹವನ್ನ ನೋಡುವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ಈ ಬಗ್ಗೆ ನಾವು ಊಹೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅಂತಹದ್ರಲ್ಲಿ ಬೌದ್ಧ ಸನ್ಯಾಸಿಯೊಬ್ಬರು ಸತ್ತು ನೂರು ವರ್ಷಗಳ ಬಳಿಕವೂ ನಗುತ್ತಿದ್ದಾರೆ ಎಂದರೆ ಯಾರಾದರು ನಂಬೋ ಮಾತಾ..?
ಹೌದು ಸತ್ತು ನೂರು ವರ್ಷಗಳಾದ ಮೇಲೂ ಮೃತ ವ್ಯಕ್ತಿ ನಗುತ್ತಿದ್ದಾರೆ ಅಂದ್ರೆ ಯಾರು ನಂಬ್ತಾರೆ ಹೇಳಿ. ಆದ್ರೆ ಇತ್ತೀಚೆಗೆ ಇಂತಹದ್ದೇ ಒಂದು ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಜನರೆಲ್ಲಾ ಇದು ಹೇಗಪ್ಪಾ ಸಾಧ್ಯ. ನಿಜ ಜೀವನದಲ್ಲಿ ಇದು ನಿಜಕ್ಕೂ ಸಾಧ್ಯನಾ ಎಂದು ತಲೆಗೆ ಉಳಬಿಟ್ಟಿಕೊಂಡಿದ್ರು.
100 ವರ್ಷಗಳ ಹಿಂದೆ ಸಮಾಧಿ ಮಾಡಲಾದ ಸನ್ಯಾಸಿಯೊಬ್ಬರ ಮೃತದೇಹವು ಇಂದಿಗೂ ನಗುತ್ತಲೇ ಇದೆ ಎಂದು ಹಲವಾರು ಮಾಧ್ಯಮಗಳು ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗಿತ್ತು. ಇನ್ನೂ ಮೃತ ಸನ್ಯಾಸಿಯು ಇಂದಿಗೂ ಜೀವಂತವಾಗಿದ್ದು, ಆಳವಾದ ಧ್ಯಾನದಲ್ಲಿದ್ದಾರೆ ಎಂದು ಕೆಲ ಬೌದ್ಧ ಧರ್ಮಗುರುಗಳು ನಂಬಿದ್ದರು. ಆದರೆ ರಾಷ್ಟ್ರೀಯ ವಾಹಿನಿಯೊಂದು ಈ ವೈರಲ್ ಸುದ್ದಿಯ ಅಸಲಿಯತ್ತನ್ನ ವಿಶ್ವದ ಎದುರು ಬಟಾಬಯಲು ಮಾಡಿದೆ.

ಅಂದಹಾಗೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಇಂಜಿನ್ನಲ್ಲಿ ಈ ವೈರಲ್ ಫೋಟೋದ ಬಗ್ಗೆ ಶೋಧ ನಡೆಸಿದಾಗ ನಿಜಾಂಶ ಬಯಲಾಗಿದೆ. ಈ ಬೌದ್ಧ ಸನ್ಯಾಸಿಗಳು 2017ರಲ್ಲಿ ಅಂದ್ರೆ 3 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು ಎಂಬ ವಿಚಾರ ವರದಿಯಾಗಿದೆ. ಸನ್ಯಾಸಿ ಲೌಂಗ್ ಫೋರ್ ಪೈನ್ ಅವರು 92ನೇ ವಯಸ್ಸಿನಲ್ಲಿ 2017, ನವೆಂಬರ್ 16ರಂದು ಬ್ಯಾಂಕಾಕ್ ಆಸ್ಪತ್ರೆಯಲ್ಲಿ ನಿಧನರಾದರು ಎನ್ನಲಾಗಿದೆ. ಈ ಎಲ್ಲಾ ವಿಚಾರಗಳಿಂದ ಸದ್ಯ ವೈರಲ್ ಕಹಾನಿಯ ಸತ್ಯಾಂಶ ಜಗತ್ ಜಾಹೀರಾಗಿದ್ದು, ಹಸನ್ಮುಖಿ ಸನ್ಯಾಸಿಯ ಫೋಟೋ ಬಗ್ಗೆ ಜನರ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.








