ಬಳ್ಳಾರಿ : ಬಳ್ಳಾರಿಯ ಹೊಸಪೇಟೆಯಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗಾಂಜಾ ಮಾರಾಟಗಾರರನ್ನು ಹೆಡೆಮುರಿ ಕಟ್ಟಿದ ಪೊಲೀಸರು ಕಾರ್ಯಾಚರಣೆ ವೇಳೆ ಸುಮಾರು 11 ಲಕ್ಷ ರೂಪಾಯಿ ಮೌಲ್ಯದ 56 ಕೆ.ಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
ಇನ್ನೂ ಹೊಸಪೇಟೆ ಮೂಲದ ಹೇಮಲತಾ (38) ಗಾಂಜಾ ಮಾರಾಟದ ಮೇನ್ ಕಿಂಗ್ ಪಿನ್ ಆಗಿದ್ದಳು. ಈ ಖತರ್ನಾಕ್ ಟೀಂ ನಗರದ ಯುವಕರಿಗೆ, ಕಾಲೇಜು ಹುಡುಗರಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದರು. ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ 6 ಜನರ ಗಾಂಜಾ ಮಾರಾಟಗಾರರ ತಂಡವನ್ನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಕಿಂಗ್ ಪಿನ್ ಹೇಮಲತಾ ಮತ್ತು ಪೆಡ್ಲರ್ ಇರ್ಫಾನ್ ಸೇರಿ ಆರು ಜನ ಕಂಬಿ ಹಿಂದೆ ಬಿದ್ದಿದ್ದಾರೆ. ಹೊಸಪೇಟೆ ಡಿವೈಎಸ್ ಪಿ ವಿ ರಘುಕುಮಾರ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.
ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್
ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...








