ಸ್ವರ ಲೋಕದ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆ ಸಂಗೀತ ಲೋಕದ ಅನೇಕರು ಸಂತಾಪ ಸೂಚಿಸಿದ್ದಾರೆ.
ಅದರಂತೆ ಎಸ್ಪಿ ಬಾಲಸುಬ್ರಮಣ್ಯಂ ಅವರ ಗರಡಿಯಲ್ಲಿ ಪಳಗಿದ ಗಾಯಕ ರಾಜೇಶ್ ಕೃಷ್ಣನ್ ಸಂಗೀತ ಸಾಮ್ರಾಟನ ಅಗಲಿಕೆಗೆ ಭಾವುಕ ಮಾತುಗಳನ್ನು ನುಡಿದಿದ್ದಾರೆ.
“ ನನ್ನ ದೇವರು ದೇವರ ಬಳಿ ಸೇರಿದರು.. ದೇವರಾದರು” ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.
ಅಲ್ಲದೇ“ ಈಗ ನಾವೇನು ಅಷ್ಟೋ ಇಷ್ಟೋ ಹಾಡುತ್ತಿದ್ದೆವೆಯೋ ಅದು ಎಸ್ಪಿಬಿ ಅವರು ಹಾಕಿದ ಭಿಕ್ಷೆ.
ಇಂಥಹ ಮತ್ತೊಬ್ಬ ಗಾಯಕ ಹುಟ್ಟಿ ಬರಬೇಕೆಂದರೆ ಇನ್ನೂ 500 ವರ್ಷ ಬೇಕು. ಅಂಥದ್ದೊಂದು ಮೇರು ಪರ್ವತವನ್ನು ನಾವಿಂದು ಕಳೆದುಕೊಂಡಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.