ಬಳ್ಳಾರಿ : ಗಣಿನಾಡು ಬಳ್ಲಾರಿಯಲ್ಲಿ ಕಳೆದ ಕೆಲ ದಿನಗಳಿಂದಲೂ ವರುಣ ಅಬ್ಬರಿಸಿ ಬೊಬ್ಬಿರಿರಿಯುತ್ತಿದ್ದಾನೆ. ವರುಣಾರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಯಿಂದಾಗಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿಭಾಗದ ರಾರಾವಿಯ ಯಲ್ಲಮನ ಹಳ್ಳದ ತಾತ್ಕಾಲಿಕ ಸೇತುವೆ ಕುಸಿದುಹೋಗಿದೆ.
ಇದರಿಂದಾಗಿ ಜನರು ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಬರದು ನಾಡು ಎಂದೇ ಕರೆಸಿಕೊಳ್ತಿದ್ದ ಬಳ್ಳಾರಿಯಲ್ಲಿ ಉತ್ತಮ ಮಳೆಯಾಗಿರೋದು ರೈತರು ಸಾರ್ವಜನಿಕರ ಸಂತಸಕ್ಕೆ ಕಾರಣವಾಗಿದ್ರೆ, ಮತ್ತೊಂದೆಡೆ ಹಲವೆಡೆ ವರುಣ ಅವಾಂತರ ಸೃಷ್ಟಿಸಿದ್ದಾನೆ.
ನಿರ್ಮಾಣ ಹಂತದ ಸೇತುವೆ ಈಗಾಗಲೇ ಕುಸಿದಿದ್ದು, ನಿತ್ಯ ವಾಹನ ಸವಾರರು ಪಾದಾಚಾರಿಗಳು ತೊಂದರೆ ಅನುಭವಿಸುವಂತಾಗಿದೆ.
ಇಲ್ಲಿ ಮಳೆ ಬಂದಾಗೆಲ್ಲಾ ಇದೇ ಪರಿಸ್ಥಿತಿ ಉದ್ಭವಿಸುತ್ತೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವುದು ಜನರ ಆರೋಪವಾಗಿದೆ.
ಇನ್ನೂ ಕೂಡಲೇ ತಾತ್ಕಾಲಿಕ ಸೇತುವೆ ಮರು ನಿರ್ಮಾಣ ಮಾಡಬೇಕೆಂದು ರಾರಾವಿ ಜನರು ಒತ್ತಾಯಿಸಿದ್ದಾರೆ.








