ಬಿರಿಯಾನಿಗಾಗಿ ಸಾಮಾಜಿಕ ಅಂತರ ಮರೆತು ರೆಸ್ಟೋರೆಂಟ್ ಹೊರಗೆ 1.5 ಕಿಲೋಮೀಟರ್ ಸರತಿ ಸಾಲು
ಹೊಸಕೋಟೆ, ಅಕ್ಟೋಬರ್02: ಕರ್ನಾಟಕದಲ್ಲಿ ರೆಸ್ಟೋರೆಂಟ್‌ಗಳನ್ನು ಮತ್ತೆ ತೆರೆಯಲು ಅವಕಾಶವಿರುವುದರಿಂದ, ರಾಜ್ಯದಲ್ಲಿ ಹೆಚ್ಚಿನ ಹೋಟೆಲ್ ಗಳು ತೆರೆದಿವೆ.
ಬೆಂಗಳೂರು ಬಳಿಯ ಬಿರಿಯಾನಿ ಅಂಗಡಿಯೊಂದಕ್ಕೆ ಸೇರುವ ಜನರ ಸಂಖ್ಯೆಯನ್ನು ನೋಡಿದರೆ ದಿಗ್ಬ್ರಮೆ ಮೂಡಿಸುತ್ತದೆ. ಹೊಸಕೋಟೆಯ ಪ್ರಸಿದ್ಧ ಆನಂದ್ ದಮ್ ಬಿರಿಯಾನಿ ಅಂಗಡಿಯ ಮುಂದೆ ಬಿರಿಯಾನಿ ಪ್ರಿಯರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ವೀಡಿಯೋವೊಂದು ಸೋಷಿಯಲ್ ವೈರಲ್ ಆಗಿದೆ. ಭಾನುವಾರ ರೆಸ್ಟೋರೆಂಟ್ ಹೊರಗೆ ಸುಮಾರು 1.5 ಕಿಲೋಮೀಟರ್ ವರೆಗೆ ಸರತಿಯಲ್ಲಿ ನಿಂತಿರುವ ನೂರಾರು ಗ್ರಾಹಕರು ನಿಂತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.
ಗೋರಿಕಾಯಿ(ಕ್ಲಸ್ಟರ್ ಬೀನ್ಸ್)ನ 7 ಅದ್ಭುತ ಪ್ರಯೋಜನಗಳು
ಬೆಂಗಳೂರಿನ ಹೊಸಕೋಟೆಯಲ್ಲಿ ಬಿರಿಯಾನಿಗಾಗಿ ಕ್ಯೂ … ಇದು ಯಾವ ಬಿರಿಯಾನಿ ಎಂದು ಹೇಳಿ.. ಇದು ಉಚಿತವೇ? ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
ಜನರು ಸರತಿ ಸಾಲಿನಲ್ಲಿ ಮಾಸ್ಕ್ ಧರಿಸಿ ನಿಂತಿದ್ದರೂ ಅವರ ನಡುವೆ ಸಾಮಾಜಿಕ ಅಂತರವಿಲ್ಲದಿರುವುದು ವೀಡಿಯೊದಲ್ಲಿ ಸೆರೆಯಾಗಿದೆ
ಉಪಾಹಾರ ಗೃಹದ ಮಾಲೀಕ ಆನಂದ್, ಲಾಕ್‌ಡೌನ್ ಗಿಂತ ಮೊದಲಿನ ಮಾರಾಟಕ್ಕೆ ಹೋಲಿಸಿದರೆ ಬಿರಿಯಾನಿ ಮಾರಾಟದಲ್ಲಿ ಶೇಕಡಾ 20 ರಷ್ಟು ಹೆಚ್ಚಳವಾಗಿದೆ ಎಂದು ಅಂದಾಜಿಸಿದ್ದಾರೆ.
Queue for biryani at Hoskote, Bangalore. Send by @ijasonjoseph
Tell me what biryani this is and is it free? pic.twitter.com/XnUOZJJd2c— Kaveri 🇮🇳 (@ikaveri) September 26, 2020
ಅನೇಕ ನೆಟ್ಟಿಗರು ಬಿರಿಯಾನಿಗಾಗಿ ಇಷ್ಟು ಉದ್ದದ ಸರತಿಯಲ್ಲಿ ನಿಂತಿರುವ ಜನರನ್ನು ನೋಡಿ ತಮಾಷೆ ಮಾಡಿದ್ದರೆ, ಕೆಲವರು ಸಾಮಾಜಿಕ ಅಂತರ ಅನುಸರಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಒಬ್ಬ ಬಳಕೆದಾರರು, ಇಂತಹ ಉದ್ದದ ಸಾಲುಗಳು ಮದ್ಯದಂಗಡಿಗಳ ಹೊರಗೆ ಮಾತ್ರ ಎಂದು ನಾನು ಭಾವಿಸಿದ್ದೆ ಎಂದು ಬರೆದಿದ್ದಾರೆ. ಇನ್ನೊಬ್ಬರು ಅಮೃತ ಸಿಕ್ಕಿದರೂ ನಾನು ಇಷ್ಟು ಉದ್ದದ ಸರತಿಯಲ್ಲಿ ನಿಲ್ಲುವುದಿಲ್ಲ ಎಂದು ತಮಾಷೆ ಮಾಡಿದ್ದಾರೆ.
ಆನಂದ್ ದಮ್ ಬಿರಿಯಾನಿಯು ವಾರದಲ್ಲಿ 3 ದಿನಗಳಲ್ಲಿ ಮಾತ್ರ ತೆರೆದಿರುತ್ತಾರೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








