ಸೂಪರ್ ಸ್ಟಾರ್ ಉಪೇಂದ್ರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಉಪೇಂದ್ರ ತಮ್ಮ ಉತ್ತಮ ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯಕ್ಕೆ ಪರ್ಯಾಯವನ್ನು ಹುಡುಕುವ ಯತ್ನದಲ್ಲಿದ್ದಾರೆ.
ಪ್ರಜಾಕೀಯ ಪರಿಕಲ್ಪನೆ ಉತ್ತಮವಾಗಿದ್ದರೂ ಜನರಿಗೆ ಅರ್ಥವಾಗುತ್ತಿಲ್ಲ. ಹೀಗಾಗಿ ಜನರಿಗೆ ತಮ್ಮ ಅಲೋಜನೆಗಳನ್ನು ಅರ್ಥ ಮಾಡಿಸಲೇಬೇಕೆಂದು ಪಣತೊಟ್ಟಿರುವ ಉಪ್ಪಿ, ಈಗ ಅಸಾಮಾನ್ಯ ಜನರಿಗಾಗಿಯೇ ಒಂದು ಓಪನ್ ಲೆಟರ್ ಬರೆದಿದ್ದಾರೆ.
ಉಪೇಂದ್ರ ಬರೆದಿರುವ ಲೆಟರ್ ನಲ್ಲಿ…
ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು ನಿನಗೊಬ್ಬನಿಗೆ ಮಾತ್ರ ಬರಲಿಲ್ಲ ನಿದ್ರೆ…
ಬ್ರಿಟಿಷರಿಗಿಂತಾ ಅಪಾಯಕಾರಿ ಈ ರಾಜಕೀಯ..
ಆಗ ನಮ್ಮನ್ನು ದೋಚುತ್ತಿರುವ ನಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿರುವ ವೈರಿ ಯಾರು ಎಂದು ಗೊತ್ತಾಗುತ್ತಿತ್ತು.
ಈ ನಮ್ಮವರೇ ಇಂಗ್ಲೀಷರು ಬಿಟ್ಟುಹೋದ ಅಧಿಕಾರದ ಗದ್ದುಗೆ ಮೇಲೆ ಕೊತಿದ್ದಾರೆ!
ಬ್ರಿಟೀಷರು ನಮ್ಮನ್ನು ಗುಲಾಮರನ್ನಾಗಿ ಮಾಡಿ ಅವರ ದೇಶಕ್ಕೆ ನಮ್ಮ ಜನರ ಪರಿಶ್ರಮ ಮತ್ತು ನೈಸರ್ಗಿಕ ಸಂಪತ್ತುನ್ನು ದೋಚುತ್ತಿದ್ದರು.
ಇದನ್ನೂ ಓದಿ : ಆರ್ ಆರ್ ನಗರ ಉಪ ಕದನ : ಎಸ್.ಎಂ ಕೃಷ್ಣ ಮೊಮ್ಮಗ `ಕೈ’ ಅಭ್ಯರ್ಥಿ.?
ಆದ್ರೆ ಈಗ ನಮ್ಮವರೇ ಬಹುರಾಷ್ಟ್ರೀಯ ಕಂಪನಿಗಳ ಮೂಲಕ ನಮ್ಮ ಜನರ ಕೌಶಲ್ಯ ಪ್ರತಿಫಲ, ಜನರ ಪರಿಶ್ರಮದ ತೆರಿಗೆ ಹಣ ಮತ್ತು ದೇಶದ ನೈಸರ್ಗಿಕ ಸಂಪತ್ತನ್ನು ಜಾಗತೀಕರಣದ ಹೆಸರಲ್ಲಿ ಎಫ್ ಡಿಐ ಮೂಲಕ ಇಡೀ ಜಗತ್ತಿನ ಹಲವು ಬಲಾಢ್ಯ ದೇಶಗಳು ದೋಚುವಂತೆ ಸಹಕರಿಸುತ್ತಿದೆ! ಇದಕ್ಕೆಲ್ಲಾ ಕಾರಣ..?
ಅದೇ ಬ್ರಿಟಿಷರು ಬಿಟ್ಟು ಹೋದ ಎ ಫಾರ್ ಆಪಲ್ ಗುಲಾಮಿ ಕೆಲಸ, ಸಂಬಳಕ್ಕಾಗಿ, ಸರ್ಟಿಫಿಕೇಟ್ ಗಾಗಿ ಓದುವ ಉರುಹೊಡೆದು ಪರೀಕ್ಷೆಯಲ್ಲಿ ಕಕ್ಕುವ ಸ್ಪರ್ಧಾತ್ಮಕ ಶಿಕ್ಷಣ ಇಸ್ರೇಲ್ ಫಿನ್ಲ್ಯಾಂಡ್ ದೇಶಗಳ ರೀತಿ ನಾವು ನವೀನ ಕೌಶಲ್ಯ, ಸಂಶೋಧನಾ ಅವಿಷ್ಕಾರಗಳು ಪ್ರಪಂಚಕ್ಕೆ ಕೊಡುವಂತಹಾ ವಿದ್ಯಾರ್ಥಿಗಳನ್ನು ಸೃಷ್ಟಿಸುವಂತಹಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮ ನಾಯಕರು ತಲೆಕೆಡಿಸಿಕೊಳ್ಳಲೇ ಇಲ್ಲ. ಕಾರಣ..?
ಅದೇ ನಾಯಕ ಸಂಸ್ಕøತಿಯ ರಾಜಕೀಯ! ಅಪ್ಪ ಹಾಕಿದ ಆಲದ ಮರದ ರೀತಿ ನಾಯಕ ತಾನು ತಿಳಿದುರುವುದೇ ಶ್ರೇಷ್ಠ ಎಂದು ಅದನ್ನೇ ಜನರ ಮೇಲೆ ಹೇರುತ್ತಾ ಹೋಗಿದ್ದು ಮತ್ತು ಸ್ವಾತಂತ್ರ್ಯ ಬಂದಿದ್ದು ನಮ್ಮ ದೇಶದವರೇ ಆಳಲು ಎಂದು ತಾನೂ ಬ್ರಿಟಿಷರು ಮಡಿದಂತೆಯೇ ಎಂದು ನಮ್ಮ ಜನರನ್ನು ತನ್ನ ಗುಲಾಮರನ್ನಾಗಿ ಮಾಡಿ ನಾನು ನಾಯಕ ಈ ದೇಶವನ್ನು ಉದ್ದಾರ ಮಾಡುತ್ತೇನೆಂದು ಹೊರಟು ದೇಶ ಎಂದರೇ ಅಲ್ಲಿ ವಾಸಿಸುವ ಜನ ಬುದ್ದಿವಂತಿಕೆಯಲ್ಲಿ ವಿಚಾರವಂತರಾಗಿ ಉದ್ಧಾರವಾಗಬೇಕೆಂದು ಸಾಮಾನ್ಯ ತಿಳುವಳಿಕೆ ಇಲ್ಲದೇ ಜನರನ್ನು ಅಂಧಕಾರದಲ್ಲೇ ಇಟ್ಟು ಜನರಲ್ಲಿ ಏನೂ ಬದಲಾವಣೆ ಕಾಣದಿದ್ದಾಗ ನಮ್ ಜನಕ್ ಏನೂ ಗೊತ್ತಾಗಲ್ಲ! ಎಂದು ಚುನಾವಣೆ ಸಮಯದಲ್ಲಿ ತಾನು ಮಾಡಿರುವ ಕೆಲಸಗಳನ್ನು ಹಣ ಚೆಲ್ಲಿ ಪ್ರಚಾರಗಳ ಮೂಲಕ ಜನರ ತಲೆ ತುಂಬಿಸುವ ಕೆಲಸ ಶುರು ಮಾಡಿದ
ಇದನ್ನೂ ಓದಿ : ಬೆಂಗಳೂರಿನಲ್ಲಿನ ಸರ್ಕಲ್ ಗೆ ಎಸ್ ಪಿಬಿ ಹೆಸರಿಡುವಂತೆ ಒತ್ತಾಯ
ಇಲ್ಲಿಂದ ರಾಜಕೀಯ ಒಂದು ವ್ಯಾಪಾರದಂತಾಗಿ ಹಣ ಇದ್ದು ಪ್ರಚಾರ ಮಾಡುವ ಶ್ರೀಮಂತ ಮತ್ತು ತೋಳ್ಬಲದಿಂದ ಹೋರಾಟ ಮಾಡುವ ಬಲಿಷ್ಠರಿಗೆ ಮಾತ್ರ ಎಂಬಂತಾಗಿ ಪ್ರಚಾರವಿಲ್ಲದೇ ಗೆಲ್ಲುವುದು ಅಸಾಧ್ಯ ಎಂದಾದಾಗ ಜಾಹೀರಾತಿಲ್ಲದೇ ಒಂದು ವಸ್ತು ಮಾರಾಟವಾಗುವುದಿಲ್ಲ ಎಂಬಂತೆ ಪ್ರಚಾರ ಕೊಡುವುದು ಎಂಬುದೂ ಒಂದು ಹಣ ಗಳಿಸುವ ವ್ಯಾಪಾರವಾಗಿ ಕೊನೆ ಕೊನೆಗೆ ನಾಯಕರದೇ ಮಾಲೀಕತ್ವದ ಪತ್ರಿಕೆ, ಟೀವಿ ಚಾನಲ್?ಗಳನ್ನೇ ಹುಟ್ಟುಹಾಕಿ ಹಲವಾರು ನಾಯಕರ ದಿಂಡೇ ಹುಟ್ಟಿಕೊಂಡಿತು.
ಪಕ್ಷ, ಪ್ರತಿಪಕ್ಷದ ಕೆಸರೆರಚಾಟ ತಾರಕಕ್ಕೇರಿ ಕೊಲೆ ಭ್ರಷ್ಟಾಚಾರ, ಅತ್ಯಾಚಾರಗಳಂತಹ ವಿಷಯಗಳನ್ನೂ ರಾಜಕೀಯಗೊಳಿಸುವ ಹೀನಾಯ ಮಟ್ಟಕ್ಕೆ ಇಂದಿ ಇಳಿದಿದೆ. ಪ್ರಜೆ ಮಾತ್ರ ಅಂದಿನಿಂದ ಇಂದಿನವರೆಗೂ ಏನೂ ಗೊತ್ತಿಲ್ಲದ ಪ್ರಚಾರ ಮತ್ತು ನಾಯಕ ಎಂಬ ದೀಪಕ್ಕೆ ಆಕರ್ಷಿತನಾಗಿ ಆ ಬೆಂಕಿಗೆ ಬಿದ್ದು ಆಹುತಿಯಾಗುವ ಹುಳುಗಳಾಗಿರುವ ಪ್ರಜೆ. ಇಂದಿಗೂ ನಾಯಕರು ವಿಜ್ರಂಭಣೆಯಿಂದ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ನೋಡಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಕೆಲವು ಸಮಯ ಖುಷಿ ಪಡುತ್ತಾನೆ! ನಿನಗೆ ಸ್ವಾತಂತ್ರ್ಯ ಸಿಗಬೇಕೆಂದರೆ ನೀನು ನಾಯಕನಾಗಬೇಕು, ನೀನು ಹೇಳಿದಂತೆ ಕೆಲಸ ಮಾಡುವ ಕೆಲಸಗಾರರನ್ನು ಕಿಟ್ಟುಕೋ ಎಂದರೆ ಏ ನಾಯಕ ಇಲ್ಲದೇ ಇದ್ದರೆ ಹೇಗಾಗುತ್ತೆ? ನಮ್ ಜನಕ್ಕೆ ಅಧಿಕಾರ ಕೊಟ್ರೆ ಅಷ್ಟೇ, ನಮ್ ಜನಾನೇ ಸರಿ ಇಲ್ಲ ಸಾರ್, ಅಂತಾನೆ! ಹಾಗಾದ್ರೆ ನೀನು ಜನ ಅಲ್ವಾ? ನೀನು ದನಾನ? ಅಂದ್ರೆ ಹಿಹಿಹಿ ಅಂತ ಹಲ್ ಕಿರಿತಾನೆ.
ಈ ಸಾಮಾನ್ಯನಿಂದ ಅಸಮಾನ್ಯರಿಗೆ….. ( ಓದಿ, ತಪ್ಪಿದ್ದರೆ ಕ್ಷಮಿಸಿ ) pic.twitter.com/SV6X3nprmv
— Upendra (@nimmaupendra) October 2, 2020
ಇಷ್ಟೆಲ್ಲ ಆದರೂ ಈ ದೇಶದ ವೈಶಿಷ್ಟ್ಯವೇನೆಂದರೆ ಈಗಲೂ ತುಂಬಾ ಯುವಕರು, ಯುವತಿಯರು ಇನ್ನೂ ವಿಚಾರವಂತರಾಗೇ ಇದ್ದಾರೆ! ಈ ಪ್ರಸ್ತುತ ವ್ಯವಸ್ಥೆಯಲ್ಲೇ ಏನೋ ಸರಿ ಇಲ್ಲಾ ಎಂದು ಯೋಚಿಸುತ್ತಿದ್ದಾರೆ! ಬದಲಾಗ್ತಿದ್ದಾರೆ! ಅಂತಹ ಅಸಾಮಾನ್ಯ ಪ್ರಜೆಗಳಿಗೆ ಪ್ರಜಾಕೀಯ ಎಂಬ ಒಂದು ವೇದಿಕೆ, ಅಸಾಮಾನ್ಯ ಜನರ ಒಂದು ಪಕ್ಷ ಬಂದಿದೆ! ಇಲ್ಲಿ ಚುನಾವಣೆಗೆ ನಿಂತು ಗೆದ್ದರೆ ಅಲ್ಲಾ ಕೆಲಸ ಸಿಕ್ಕರೆ ಅವನು ಸಂಬಳ ತಗೊಂಡು ಜನರು ಹೇಳೋ ಕೆಲಸ ಮಾತ್ರ ಮಾಡೋ ಕಾರ್ಮಿಕ ಆಗ್ತಾನೆ. ಜನಗಳೇ ನಾಯಕರಾಗ್ತಾರೆ. ಜನರಿಗೆ ಇಷ್ಟ ಆಗ್ಲಿಲ್ಲಾ ಅಂದ್ರೆ ಕೆಲಸ ಬಿಟ್ಟು ಹೋಗ್ತಾನೆ. ಮತ್ತೆ ಇನ್ನೊಂದು ಚುನಾವಣೇನಾ? ಅಂತ ತಲೆ ಕೆಡಿಸಿಕೊಳ್ಳಬೇಡಿ. ಈ ಥರಾ ಒಂದೆರಡು ಕಡೆ ಆದ್ರೆ ಬೇರೆ ಜನಪ್ರತಿನಿಧಿಗಳು ಹುಷಾರಾಗ್ತಾರೆ. ನಮಗೆ ಸಂಬಳ ಕೊಡೋರು ಕೇಳ್ತಾರೆ ಅಂತ. ಇದು ಖIಉಊಖಿ ಖಿಔ ಅಂಐಐ ಃಂಅಏ ಸಂವಿಧಾನದಲ್ಲಿ ಬರಬೇಕು.
ಜನ ಈ ರೀತಿ ತಮಗೆ ಏನು ಬೇಕು ಅಂತ ಆಡಳಿತದಲ್ಲಿ ಅಧಿಕಾರದಲ್ಲಿ ಭಾಗವಹಿಸಿದರೆ ಜನರಿಗೆ ಬೇಕಾಗಿರೋ ಶಿಕ್ಷಣ, ಆರೋಗ್ಯ, ಕೆಲಸ ಹೀಗೆ ಒಂದೊಂದಾಗಿ ಬದಲಾಗುತ್ತೆ ಎಲ್ಲದಕ್ಕಿಂತಾ ಮುಖ್ಯವಾಗಿ ಜನ ಬದಲಾಗ್ತಾರೆ, ಸ್ವತಂತ್ರರಾಗಿ ವಿಚಾರ ಮಾಡುವ ಬುದ್ಧಿವಂತರಾಗ್ತಾರೆ, ಆವಿಷ್ಕಾರಗಳಾಗುತ್ತೆ, ಆತ್ಮನಿರ್ಭರ ಭಾರತ ಆಗುತ್ತೆ ನಮ್ ಕಾಲ್ಮೇಲೆ ನಾವು ನಿಲ್ತೀವಿ. ನನಗೊಬ್ಬ ನಾಯಕ ಬೇಕು ಎಂಬ ಗುಲಾಮಗಿರಿ ಹೋದ್ರೆ ತಾನೇ ನಮ್ ಜನ ? ನಾಯಕರಾಗೋದು? ಉದ್ದಾರ ಆಗೋಗು? ಅಂದ್ರೆ ಆ ಜನ ಇರೋ ಈ ದೇಶ ಉದ್ಧಾರ ಆಗೋದು. ಅದೆಲ್ಲದಕ್ಕಿಂತ ಮುಂಚೆ ಈಗ ಈ ಕ್ಷಣ ನನಗೆ ಯಾವ ತೋಲಾಂಡಿ ನಾಯಕ ಬೇಡ. ನಾನೇ ಸ್ವಯಂ ನಾಯಕ ಆಗ್ತೀನಿ ಅಂತ ಆತ್ಮವಿಶ್ವಾಸದಿಂದ ಈ ಸಂದೇಶವನ್ನು ನಾಲ್ಕು ಮಂದಿಗೆ ಫಾರ್ವರ್ಡ್ ಮಾಡ್ತೀರಾ..? ಅಂತ ಉಪೇಂದ್ರ ಮನವಿ ಮಾಡಿದ್ದಾರೆ.








