ಐಪಿಎಲ್ 2020 ( Ipl2020 ) -ಮುಂಬೈ ಇಂಡಿಯನ್ಸ್ ಗೆ ತಲೆಬಾಗಿದ ಸನ್ ರೈಸರ್ಸ್ ಹೈದ್ರಬಾದ್
ಐಪಿಎಲ್ ( Ipl2020) ಟೂರ್ನಿಯ 17ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 34 ರನ್ ಗಳಿಂದ ಸನ್ ರೈಸರ್ಸ್ ಹೈದ್ರಬಾದ್ ತಂಡವನ್ನು ಪರಾಭವಗೊಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ರೋಹಿತ್ ಶರ್ಮಾ (0) ಅವರ ವಿಕೆಟ್ ಅನ್ನು ಕಳೆದುಕೊಂಡಿತು.
ಆದ್ರೆ ಆರಂಭಿಕ ಕ್ವಿಂಟಾನ್ ಡಿಕಾಕ್ (67) ಮತ್ತು ಸೂರ್ಯಕುಮಾರ್ ಯಾದವ್ (27) ತಂಡಕ್ಕೆ ಆಧಾರವಾಗಿ ನಿಂತ್ರು.
ಹಾಗೇ ಇಶಾನ್ ಕಿಶಾನ್ (31) ಮತ್ತು ಹಾರ್ಧಿಕ್ ಪಾಂಡ್ಯ (28) ರನ್ ಗಳಿಸಿ ತಮ್ಮ ಹೋರಾಟವನ್ನು ಮುಗಿಸಿದ್ರು.
ಕೊನೆ ಕ್ಷಣದಲ್ಲಿ ಮಿಂಚಿನಂತೆ ಬ್ಯಾಟಿಂಗ್ ಮಾಡಿದ್ದ ಕಿರಾನ್ ಪೊಲಾರ್ಡ್ ಮತ್ತು ಕೃನಾಲ್ ಪಾಂಡ್ಯ ಮುಂಬೈ ತಂಡದ ರನ್ ಏರಿಕೆಯನ್ನು 200ರ ಗಡಿ ದಾಟಿಸಿದ್ರು.
ಕಿರಾನ್ ಪೊಲಾರ್ಡ್ ಅವರು 13 ಎಸೆತಗಳಲ್ಲಿ ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 25 ರನ್ ಗಳಿಸಿದ್ರೆ, ಕೃನಾಲ್ ಪಾಂಡ್ಯ ಅವರು ನಾಲ್ಕು ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದ ಅಜೇಯ 20 ರನ್ ಸಿಡಿಸಿದ್ರು.
ಪರಿಣಾಮ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್‍ಗೆ 208 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಸನ್ ರೈಸರ್ಸ್ ತಂಡ ಮುಂಬೈಗೆ ದಿಟ್ಟ ಉತ್ತರವನ್ನು ನೀಡುವ ಸೂಚನೆ ನೀಡಿತ್ತು.
ಆದ್ರೆ ಜೋನಿ ಬೇರ್ ಸ್ಟೋ 25 ರನ್, ಮನಿಷ್ ಪಾಂಡೆ 30 ರನ್ ಹಾಗೂ ಕೇನ್ ವಿಲಿಯಮ್ಸನ್ ಅವರು 3 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಇನ್ನೊಂದೆಡೆ ಕಳೆದ ಪಂದ್ಯ ಹೀರೋ ಪ್ರಿಯಮ್ ಗರ್ಗ್ ಎಂಟು ರನ್ ಸೀಮಿತವಾದ್ರು. ಮತ್ತೊಂದೆಡೆ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಡೇವಿಡ್ ವಾರ್ನರ್ ಆಕರ್ಷಕ 60 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ಇನ್ನುಳಿದಂತೆ ಅಭಿಷೇಕ್ ಶರ್ಮಾ 10 ರನ್ ಗಳಿಸಿದ್ರೆ, ಅಬ್ದುಲ್ ಸಮಾದ್ 20 ರನ್‍ಗೆ ಸುಸ್ತಾಗಿಬಿಟ್ರು. ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ ಏಳು ವಿಕೆಟ್ ಗೆ 174 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಟ್ರೆಂಟ್ ಬೌಲ್ಟ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ್ರು.
ಐಪಿಎಲ್ 2020- ವಾಟ್ಸನ್- ಡುಪ್ಲೇಸಸ್ ಆರ್ಭಟಕ್ಕೆ ಶರಣಾದ ಕಿಂಗ್ಸ್ ಇಲೆವೆನ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel