ಚಂದನವನದ ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ಅವರು ತಮ್ಮ ಮೊದಲ ಮಗುವ ನಿರೀಕ್ಷೆಯಲ್ಲಿದ್ದಾರೆ.
ನಟಿ ಅಪೇಕ್ಷಾ ಹಾಗೂ ಪವನ್ ಒಡೆಯರ್ ಅವರು ಈ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಪವನ್ ಹಾಗೂ ಅಪೇಕ್ಷಾಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು,
ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
“ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು.
ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ.
ಹಡಿನರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ.”
ಎಂದು ತಮ್ಮ ಫೋಟೋಗಳಿಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.
ಪವನ್ ಅವರೇ ಹೇಳಿಕೊಂಡಿರುವಂತೆ ತಮ್ಮ ಖುಷಿಯನ್ನ ಹಾಡಿನ ಮೂಲಕ ಹಂಚಿಕೊಳ್ಳಲಿದ್ದು,
ಸದ್ಯದಲ್ಲೇ ಈ ಹಾಡನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಈ ಹಾಡನ್ನು ಖುದ್ದು ಪವನ್ ಒಡೆಯರ್ ಅವರೇ ಬರೆದಿದ್ದು, ಪ್ರವೀಣ್ ಆಲಿವರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಹಾಡನ್ನು ಅಕ್ಟೋಬರ್ 11ರಂದು ರಿಲೀಸ್ ಮಾಡುತ್ತಿದ್ದಾರೆ.
ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ, ಜೆಸ್ಸಿ, ನಟರಾಜ ಸರ್ವೀಸ್, ನಟ ಸಾರ್ವಭೌಮ ದಂತಹ ಖ್ಯಾತ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ಪವನ್











