ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಸರ್ಕಾರ ವಿಶ್ವಾಸಮತ ಯಾಚಿಸುವಂತೆ ಶನಿವಾರ ತಡರಾತಿ ರಾಜ್ಯಪಾಲ ಲಾಲ್ ಜಿ. ಟಂಡನ್ ಆದೇಶ ಹೊರಡಿಸಿದ್ದರು. ಈ ಕಾರಣಕ್ಕಾಗಿ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ಸಿಎಂ ಕಮಲ್ ನಾಥ್ ಅವರಿಗೆ ನಿರ್ದೇಶನ ನೀಡಿದ್ದರು. ಒಂದೆಡೆ 22 ಶಾಸಕರು ವಿಧಾನಸಭೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಗೆ ಕಳುಹಿಸಿದ್ದಾರೆ. ಮತ್ತೊಂದೆಡೆ ಇಂದು ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಇದರಿಂದ ಕಮಲ್ ನಾಥ್ ಅವರಿಗೆ ಸರ್ಕಾರ ಉಳಿಸಿಕೊಳ್ಳಲು ಸಂಕಷ್ಟ ಎದುರಾಗಿತ್ತು.
ಈ ನಡುವೆ ಕಮಲ್ ನಾಥ್ ನೇತೃತ್ವದ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮಾರ್ಚ್ 16 ರಂದು ನಡೆಯಬೇಕಿದ್ದ ಮಧ್ಯಪ್ರದೇಶದ ವಿಧಾನಸಭೆ ಅಧಿವೇಶವನ್ನು ಕೊರೊನಾ ಭೀತಿಯಿಂದ ಮಾರ್ಚ್ 26 ಕ್ಕೆ ಮುಂದೂಡಲಾಗಿದೆ.
ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿ ಸೋಮವಾರ ಕಮಲ್ ನಾಥ್ ಸರ್ಕಾರದ ಸದನ ಪರೀಕ್ಷೆ ನಡೆಸದೆ ಕಲಾಪವನ್ನು ಮುಂದೂಡಿದ್ದಾರೆ. ಕಲಾಪ ಆರಂಭಕ್ಕೆ ಮುನ್ನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಗವರ್ನರ್ ಲಾಲ್ ಟಂಡನ್, ಸದನದ ಪ್ರತಿಯೊಬ್ಬ ಸದಸ್ಯರೂ ಕಾನೂನನ್ನು ಪಾಲಿಸಿ ಗೌರವವನ್ನು ಕಾಪಾಡಬೇಕು ಎಂದರು. ರಾಜ್ಯಪಾಲರು ಹೆಚ್ಚು ಸಮಯ ಭಾಷಣ ಮಾಡಲಿಲ್ಲ. ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆ ಸಭಾಧ್ಯಕ್ಷ ಎನ್.ಪಿ. ಕಲಾಪವನ್ನು ಮಾ.26ಕ್ಕೆ ಮುಂದೂಡಿದರು. ಸದನದಲ್ಲಿ ಹಾಜರಿದ್ದ ಬಹುತೇಕ ಶಾಸಕರು ಕೊರೊನಾ ಬೀತಿಯಿಂದ ಮಾಸ್ಕ್ ಧರಿಸಿದ್ದು ಕಂಡು ಬಂದಿತ್ತು. ಜೊತೆಗೆ ಕೈಗಳಿಗೆ ಸ್ಯಾನಿಟೈಸರ್ ಗಳನ್ನು ಧರಿಸಿದ್ದು ಗೋಚರಿಸಿದ್ದರು.
ಬಂಡಾಯದಿಂದಾಗಿ ಅಲ್ಪಮತಕ್ಕೆ ಕುಸಿದಿದ್ದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸರ್ಕಾರಕ್ಕೆ ಕಲಾಪ ಮುಂದೂಡಿದ ಪರಿಣಾಮದಿಂದಾಗಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.









