ಬಳ್ಳಾರಿ: ಚೈನ್ ಸ್ಯಾಚ ಮಾಡಲು ಹೋದ ಖದೀಮ (chain snacher) ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಧರ್ಮದೇಟು ತಿಂದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. 60 ವರ್ಷದ ಮಹಿಳೆಯ ಬಳಿ 2 ತೊಲೆ ಬಂಗಾರದ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನ ಸ್ಥಳೀಯರು ಹಿಡಿದು ಗೂಸಾ ಕೊಟ್ಟಿದ್ದಾರೆ. ಬಳಿಕ ಆತನನ್ನ ಪೊಲೀಸ್ ಠಾಣೆಗೆ ಎಳೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಳ್ಳಾರಿಯ ರೂಪನಗುಡಿ ರಸ್ತೆಯ ನಾರಪ್ಪ ಬೀದಿಯಲ್ಲಿ ಚೈನ್ ಸ್ನಾಚಿಂಗ್ (chain snacher) ಮಾಡಲು ಯತ್ನಿಸಿದ ವೇಳೆ ಸಿಕ್ಕಿಬಿದ್ದ ಖದೀಮನನ್ನ ಬ್ರೂಸ್ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಇದೇ ವ್ಯಕ್ತಿಯಿಂದ ಈ ಹಿಂದೆಯೂ ಸಹ ಹಲವೆಡೆ ಸರಗಳ್ಳತನವಾಗಿರುವ ಆರೋಪಗಳು ದಾಖಲಾಗಿವೆ.
ಕೆ ಜಿಎಫ್ ಶೂಟಿಂಗ್ ಅಖಾಡಕ್ಕೆ ಮತ್ತೆ ‘ರಾಕಿ ಬಾಯ್’ ಎಂಟ್ರಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel