ಮಹಾಮಾರಿ ಕೊರೊನಾ ಜನರ ಜೀವನವನ್ನ ಬೀದಿಗೆ ತಂದು ನಿಲ್ಲಿಸಿದೆ. ಈ ಹೆಮ್ಮಾರಿ ಹೊಡೆತಕ್ಕೆ ಎಲ್ಲ ವಲಯಗಳು ತತ್ತರಿಸಿ ಹೋಗಿವೆ. ಕೊರೊನಾ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆ ಕುಸಿದು ಹೋಗಿದೆ.
ಇದಕ್ಕೆ ರಿಯಲ್ ಎಸ್ಟೇಟ್ ಕ್ಷೇತ್ರವೂ ಹೊರತಾಗಿಲ್ಲ. ಸದ್ಯ ದೇಶದಲ್ಲಿ ಈಗ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಲಾಕ್ ಡೌನ್ ನಿಂದ ತತ್ತರಿಸಿ ಹೋಗಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಈಗ ಕೊಂಚ ಚೇತರಿಕೆ ಕಾಣುತ್ತಿದೆ.
ಹಾಗಾದ್ರೆ ಕೊರೊನಾ ಲಾಕ್ ಡೌನ್ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹೇಗೆ ಹೊಡೆತಾ ನೀಡ್ತು..? ಎಂಬುದರ ಬಗ್ಗೆ ಎನ್ಕೋರ್ ಪ್ರಾರ್ಪಟಿಸ್ ಸಿಇಒ ಯಶ್ವಂತ್ ಸೋಮಶೇಖರ್ (Yeshwanth Somashekhar) ಹೇಳಿದ್ದು ಹೀಗೆ…
ಜೀವನೋಪಾಯಕ್ಕಾಗಿ ಹೆಚ್ಚಿನ ಜನರು ನಗರಗಳತ್ತ ಬರುತ್ತಾರೆ. ಹೀಗಾಗಿ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಜನ ಸಂಖ್ಯೆ ಹೆಚ್ಚಾಗಿರುತ್ತೆ. ಈ ಕಾರಣ ನಗರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಮತ್ತೆ ಚೇತರಿಕೆ ಕಾಣುತ್ತದೆ.
ಅದರಲ್ಲೂ ಮುಖ್ಯವಾಗಿ ಸರ್ಕಾರದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಹಕಾರಿಯಾಗಿದೆ. ಇದು ಖಂಡಿತವಾಗಿಯೂ ಉತ್ತಮವಾದ ಕ್ರಮವಾಗಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಮತ್ತು ವಹಿವಾಟು ಚಟುವಟಿಕೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : ಇಂದು ವಿಶ್ವ ವಿದ್ಯಾರ್ಥಿ ದಿನ – ವಿದ್ಯಾರ್ಥಿಗಳ ಸ್ಫೂರ್ತಿಯ ಮೂಲ ಕಲಾಂ ಮೇಷ್ಟ್ರು ಅವರ ಜನ್ಮದಿನ
ಜೊತೆಗೆ ಸರ್ಕಾರ ಬ್ಯಾಂಕ್ ಇನ್ಸ್ಟೆರೆಸ್ಟ್ ಮತ್ತು ಸ್ಟಾಂಪ್ ಡ್ಯೂಟಿಯನ್ನು ಕಡಿಮೆ ಮಾಡಿದರೆ ಇನ್ನೂ ಉತ್ತಮವಾಗಿರುತ್ತದೆ. ಇದರಿಂದ ವಸತಿ ಮಾರಾಟದ ಏರಿಕೆಗೆ ನಾವು ಸಾಕ್ಷಿಯಾಗಬಹುದು.
ದೊಡ್ಡ ಕಚೇರಿಗಳ ಬಾಡಿಗೆ ಉಳಿಸಲು ಬಯಸುವ ಕಂಪನಿಗಳು ಮೈಸೂರಿನಂತಹ ಪಿಎಸ್‍ಒ ನಗರಗಳಿಗೆ ಹೋಗುತ್ತಿವೆ. ಇದು ಅಂತಹ ನಗರಗಳಲ್ಲಿ ಕಚೇರಿ ನಿರ್ಮಾಣ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಹಾಗೇ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಇದು ಸಹಕಾರಿಯಾಗಿದೆ.
ಇನ್ನು ಲಾಕ್ ಡೌನ್ ನಿಂದಾಗಿ ಬೆಲೆ ಅಥವಾ ದರಗಳು ಇಳಿದಿಲ್ಲ ಆದರೆ ಖಂಡಿತವಾಗಿಯೂ ಬೇಡಿಕೆ ಕಡಿಮೆಯಾಗಿದೆ ಎಂದು ಯಶ್ವಂತ್ ಸೋಮಶೇಖರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಕಲ್ಪತರು ನಾಡಿನಲ್ಲಿರುವ ಮಧುಗಿರಿ ಬೆಟ್ಟದ ವೈಭವ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









