ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ( Rakshith shetty ) ಕೊಡೈಕೆನಾಲ್ ಕಡೆ ಪಯಣ ಬೆಳೆಸಿದ್ದಾರೆ. ಇತ್ತೀಚಿಗೆ ಗೋವಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದ “ಕಿರಿಕ್ ” ನಾಯಕ (Rakshith shetty )ಕೊಡೈಕೆನಾಲ್ ಗೆ ಪಯಣ ಬೆಳೆಸಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಕ್ಷಿತ್ ‘ರಿಚ್ಚಿ’ ಸಿನಿಮಾಗಾಗಿ ಗೋವಾಗೆ ತೆರಳಿದ್ದರು. ಇದೀಗ ” ಚಾರ್ಲಿ “ಗಾಗಿ ಕೊಡೈಕೆನಾಲ್ ಗೆ ಹೊರಟಿದ್ದಾರೆ.
ಇದನ್ನೂ ಓದಿ : ಹೈದ್ರಾಬಾದ್ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ‘ರಾಕಿಬಾಯ್’..!
ಸದ್ಯ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 777 ಚಾರ್ಲಿ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಚಿತ್ರೀಕರಣಕ್ಕಾಗಿ ಕೊಡೈಕರೆನಾಲ್ ಕಡೆ ಚಿತ್ರತಂಡದ ಜೊತೆ ಪಯಣ ಬೆಳೆಸಿದ್ದಾರೆ.
ಮುಂದಿನ ಹಂತದ “777 ಚಾರ್ಲಿ”ಚಿತ್ರೀಕರಣ ಕೊಡೈಕೆನಾಲ್ ನಲ್ಲಿ ನಡೆಯಲಿದೆ.

ಈ ಬಗ್ಗೆ ನಿರ್ದೇಶಕ ಕಿರಣ್ ಕೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಶೂಟಿಂಗ್ ಮುಗಿಸಲಿದೆ.
ಇದನ್ನೂ ಓದಿ : ಮಿಸ್ಟರ್ ಇಂಡಿಯಾ ಜಿಮ್ ರವಿಗೆ ಒಲಿದ ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ
ಈ ಸಿನಿಮಾದ ಜೊತೆಗೆ ‘ಸಪ್ತ ಸಾಗರದಾಚೆ’ ಮತ್ತು ‘ಪುಣ್ಯಕೋಟಿ’ ಸಿನಿಮಾ ರಕ್ಷಿತ್ ಬಳಿ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








