Darshan – Yash
ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರ ಹೈ ವೋಲ್ಟೇಜ್ ಕಣವಾಗಿ ಮಾರ್ಪಾಡಾಗಿತ್ತು.
ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಅಖಾಡಲ್ಲಿ ಟಕ್ಕರ್ ಕೊಟ್ಟಿದ್ದು ದಿ. ಅಂಬರೀಷ್ ಪತ್ನಿ ಸುಮಲತಾ ಅಂಬರೀಷ್.
ಸುಮಲತಾಗೆ ಸ್ಟಾರ್ ನಟರೇ ಸಾಥ್ ನೀಡಿ ಪ್ರಚಾರ ಕuಕ್ಕೆ ಒಟ್ಟಾಗಿ ಧುಮಿಕಿ ಮತಯಾಚಿಸಿದ್ರು.
ಇತ್ತ ಬಿಜೆಪಿ ಪಕ್ಷ ಬಹಿರಂಗವಾಗಿಯೇ ಅಭ್ಯರ್ಥಿ ನಿಲ್ಲಿಸದೇ ಸುಮಲತಾರಿಗೆ ಬೆಂಬಲ ಸೂಚಿಸಿತ್ತು.
ಈ ವೇಳೆ ಇಡೀ ದೇಔಏ ಮಂಡ್ಯದತ್ತ ತಿರುಗಿನೋಡುವಂತೆ ಮಾಡಿದ್ದು, ಸ್ಟಾರ್ ನಟರ ಜೋಡಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಹಗಲೂ ರಾತ್ರಿ ಮಂಡ್ಯದಲ್ಲಿ ಸುಮಲತಾ ಪರ ಮತಯಾಚಿಸಿದ್ದು, ಸುಮಲತಾ ಸಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಜಯ ಸಾಧಿಸಿದ್ರು.
ಇದೀಗ ಮತ್ತೊಮ್ಮ ಈ ಸ್ಟಾರ್ ಜೋಡಿ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಜೋಡಿ ಮತ್ತೆ ಒಂದಾಗುತ್ತಿದೆ ಎನ್ನಲಾಗ್ತಾಯಿದೆ.
ನಟ ದರ್ಶನ್ ಹಾಗೂ ಯಶ್ ಮತ್ತೆ ಚುನಾವಣಾ ಪ್ರಚಾರ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂಬ ದಟ್ಟ ಸುದ್ದಿ ಹರಿದಾಡುತ್ತಿದೆ.
ತೆರೆ ಮೇಲೆ ‘ಚಿರು’ ನೋಡಿ ಕಣ್ಣೀರಿಟ್ಟ ತಾಯಿ ಅಮ್ಮಾಜಿ
ಇದೀಗ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಉಪಚುನಾವಣೆಯಲ್ಲಿ ಖ್ಯಾತ ನಿರ್ಮಾಪಕ, ರಾಜಕಾರಣಿ ಮುನಿರತ್ನ ಆರ್ಆರ್ ನಗರ ಉಪಚುನಾವಣೆಗೆ ಸ್ಪರ್ಧಿಸಿದ್ದು, ಮುನಿರತ್ನಗೆ ನಟ ದರ್ಶನ್ ಹಾಗೂ ಯಶ್ ಇಬ್ಬರೂ ಸಹ ಆಪ್ತರು.
ಹಾಗಾಗಿ ಮುನಿರತ್ನ ಪರ ಈ ಇಬ್ಬರು ಚುನಾವಣೆ ಪ್ರಚಾರ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Darshan – Yash








