ಬೆಂಗಳೂರು: ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕುಸುಮಾ ವಿರುದ್ಧ ಎಫ್ ಆರ್ ದಾಖಸಿರುವ ಪೊಲೀಸರು,ನನ್ನನ್ನು ಅನ್ನೋನ್ ಪರ್ಸನ್ (unknown person) ಎಂದು ಉಲ್ಲೇಖಿಸಿದ್ದಾರೆ. ಅಂದ್ರೆ ರಾಜ್ಯದಲ್ಲಿ ನಾನು ಅನಾಮಧೇಯನಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಕೆ ದಿನ ನಾನು ಕುಸುಮಾ ಮತ್ತು ಅವರ ತಂದೆ ಮೂರು ಮಂದಿ ಹೋಗಿದ್ದೆವು.
ಡಿ.ಕೆ.ಶಿವಕುಮಾರ್ ಅವರು ಬರಲಿ ಎಂದು ಕುಳಿತಿದ್ದೆವು. ಅದು ತಪ್ಪೇ ? ಎಫ್ಐಆರ್ ದಾಖಲಿಸಿರುವ ಪೊಲೀಸರು ಕುಸುಮಾ ಅವರ ಹೆಸರನ್ನು ಬರೆದಿದ್ದಾರೆ.
ಇದನ್ನೂ ಓದಿ : ಇಷ್ಟು ದಪ್ಪ ಚರ್ಮದ ಸರ್ಕಾರ ನಾನು ಎಂದೂ ನೋಡಿಲ್ಲ : ಸಿದ್ದರಾಮಯ್ಯ
ನನ್ನ ಹೆಸರು ಎಫ್ ಐಆರ್ ನಲ್ಲಿ ಇಲ್ಲ. ಅನೌನ್ ಪರ್ಸನ್ ಎಂದು ಹಾಕಿದ್ದಾರೆ. ನಾನು ಅನ್ನೋನ್ ಪರ್ಸನಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ.
ಪೊಲೀಸರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಅಂದು ನಾನು ನಾಮಪತ್ರ ಸಲ್ಲಿಕೆಗೆ ಹೋಗಿದ್ದು ಬೆಳಗ್ಗೆ 11.45ಕ್ಕೆ. ಪೊಲೀಸರು 11.15 ಎಂದು ಸಮಯ ಹಾಕಿದ್ದಾರೆ. ಮೊದಲೇ ಹೇಗೆ ದೂರು ನೀಡೋಕೆ ಸಾಧ್ಯ ಪ್ರಶ್ನಿಸಿದರು.
ಇದನ್ನೂ ಓದಿ : `FIR ಹಾಕಿಸಿದವ್ರು ಗಂಡಸರೇ’ ಡಿಕೆಶಿ ಹೇಳಿಕೆ : ವರ್ಕೌಟ್ ಆಗಲ್ಲ ಎಂದ ರಾಮುಲು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










