PM Narendra Modi
ನವದೆಹಲಿ: ದೇಶದ ಪ್ರತಿ ನಾಗರಿಕನಿಗೂ ಕೋವಿಡ್ -19 ಲಸಿಕೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇಂದು ಸಂಜೆ ದೇಶದ ಜನರನ್ನು ಉದ್ದೇಶಿಸಿ ನೇರ ಪ್ರಸಾರದಲ್ಲಿ ಮಾತನಾಡಿದ ಅವರು
ಮಹಾಮಾರಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಆರಂಭವಾಗಿ ಇದುವರೆಗೂ ನಾವು ಸಾಧಿಸಿದ ಪ್ರಗತಿ ಶ್ಲಾಘನೀಯ ಎಂದರು. ಇನ್ನೂ ಇದೇ ವೇಳೆ ಲಾಕ್ ಡೌನ್ ಅಂತ್ಯವಾಗಿದೆ. ಆದರೆ ಕೊರೋನಾ ಮುಕ್ತವಾಗಿಲ್ಲ. ಹೀಗಾಗಿ ನಾವು ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶದ ಜನರ ಬಳಿ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದರು.

ಮುಂದುವರೆದು ಮಾತನಾಡಿದ ಪ್ರಧಾನಿಗಳು ದೇಶದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಇಡೀ ವಿಶ್ವದಲ್ಲೇ ಅಧಿಕವಾಗಿದ್ದು, ಸಾವಿನ ಪ್ರಮಾಣ ಸಹ ಅತ್ಯಂತ ಕಡಿಮೆ ಇದೆ. ಭಾರತದಲ್ಲಿ ಕೊರೋನಾ ಗುಣಮುಖ ಪ್ರಮಾಣ ಶೇ.83ರಷ್ಟಿರುವುದು ಸಾಧನೆ. ಕೊರೋನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿಬೇಕು. ಲಸಿಕೆಯನ್ನು ದೇಶದ ಪ್ರತಿಯೊಬ್ಬರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.
‘ಭಾರತ್ ತೇರೆ ತುಕ್ ಡೇ ಹೋಂಗೆʼ ಅಂದ್ರೆ ಹುಷಾರ್..! : ಯೋಗಿ ವಾರ್ನಿಂಗ್
PM Narendra Modi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








