ಬಿಜೆಪಿ ಬ್ರಹ್ಮಾಸ್ತ್ರಗಳಿಗೆ ಕಾಂಗ್ರೆಸ್ ಬಳಿ ಅಸ್ತ್ರ ಇಲ್ಲ : ಆರ್.ಅಶೋಕ್ ವ್ಯಂಗ್ಯ (minsiter R ashok)
ಬೆಂಗಳೂರು : ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಸೋಲು ಅಂತ ಬಂದಿದೆ. ಡಿ.ಕೆ.ಶಿವಕುಮಾರ್ ಶಸ್ತ್ರ ತ್ಯಾಗ ಮಾಡಿ ಪಲಾಯನ ಮಾಡಿದ್ದಾರೆ. ಬಿಜೆಪಿ ಬ್ರಹ್ಮಾಸ್ತ್ರಗಳಿಗೆ ಕಾಂಗ್ರೆಸ್ ಬಳಿ ಅಸ್ತ್ರ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯರ ಬಿಜೆಪಿಗೆ ಧಮ್ ಇದೆಯಾ ಎಂಬ ಪ್ರಶ್ನೆಗೆ ಕಿಡಿಕಾರಿದರು. ಸಿದ್ದರಾಮಯ್ಯ ಬಿಜೆಪಿಗೆ ಧಮ್ ಇದೆಯಾ ಅಂತ ಕೇಳ್ತಾರೆ. ನಮಗೆ ಧೈರ್ಯ ಇರೋದಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ್ತಿದೆ. 370 ವಿಧಿ ರದ್ದು ಮಾಡಿದ್ದು ಬಿಜೆಪಿ, ಇದು ಬಿಜೆಪಿಯ ಧೈರ್ಯ. ತ್ರಿವಳಿ ತಲಾಕ್ ರದ್ದು ಮಾಡಿದ್ದು ಎಂದು ಸಿದ್ದರಾಮಯ್ಯ ಅವರ ವಿರುದ್ಧ ಮಾತಿನ ಚಾಟಿ ಬೀಸಿದರು.
ಸಿದ್ದುಗೆ ಆರ್ ಅಶೋಕ್ ಸವಾಲ್
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದ ಆರ್. ಅಶೋಕ್, ಸಿದ್ದರಾಮಯ್ಯಗೆ ಧಮ್ ಇದ್ದರೆ ಅಡಾಕ್ ಅಧ್ಯಕ್ಷರನ್ನ ತೆಗೆದು ಬೇರೆ ಅಧ್ಯಕ್ಷರನ್ನ ಮಾಡಲಿ. ಸಿದ್ದರಾಮಯ್ಯಗೆ ಧೈರ್ಯ ಇದ್ದರೆ ಎಐಸಿಸಿಗೆ ಪತ್ರ ಬರೆದು ಅಧ್ಯಕ್ಷರ ಬದಲಾವಣೆ ಮಾಡಿಸಲಿ ಎಂದು ಸವಾಲೆಸೆದರು.
ಇದನ್ನೂ ಓದಿ : `ಸಿದ್ದರಾಮಯ್ಯ ಧಮ್’ ಗೆ ಸವಾಲ್ ಹಾಕಿದ ಕಟೀಲ್
ಎರಡೂ ಕಡೆ ನಮ್ಮದೇ ಗೆಲುವು
ಇದೇ ವೇಳೆ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು. ರಾಜ್ಯದಲ್ಲಿ ಉಪ ಚುನಾವಣೆ ರಂಗೇರುತ್ತಿದೆ. ಎರಡೂ ಕ್ಷೇತ್ರದಲ್ಲಿ ಅತಿ ದೊಡ್ಡ ಲೀಡ್ ನಲ್ಲಿ ಗೆಲ್ತೀವಿ. ಆರ್.ಆರ್. ನಗರದಲ್ಲಿ ಕುರುಕ್ಷೇತ್ರ ಪ್ರಾರಂಭ ಆಗಿದೆ. ಕಾಂಗ್ರೆಸ್ಸಿಗೆ ಸೋಲಿನ ಭಯ ಆಗಿ ಚುನಾವಣೆ ಆಯೋಗಕ್ಕೆ ಮನವಿ ಮೇಲೆ ಮನವಿ ಕೊಡ್ತಿದೆ. ಕಾಂಗ್ರೆಸ್ ಪ್ರೊಟೆಸ್ಟ್ ರಾಜಕೀಯ ಮಾಡ್ತಿದೆ. ನಾವು ಅಭಿವೃದ್ಧಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಇನ್ನು ಈ ಸುದ್ದಿಗೋಷ್ಠಿಯಲ್ಲಿ ಸಚಿವರಾದ ಗೋಪಾಲಯ್ಯ, ಸೋಮಶೇಖರ್, ನಾರಾಯಣಗೌಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಇದನ್ನೂ ಓದಿ : ನಾನೇ ಸಿಎಂ ಆಗ್ತೇನೆ ಎಂದು ಯತ್ನಾಳ್ ನನ್ನ ಬಳಿ ಹೇಳಿದ್ದಾರೆ : ಹೊರಟ್ಟಿ
ಸಿದ್ದರಾಮಯ್ಯ ಹೇಳಿದ್ದೇನು..?
ಬಿಹಾರ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು, ಕೊರೊನಾ ಲಸಿಕೆಯನ್ನು ಬಿಹಾರಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, ಪ್ರಾಣ ರಕ್ಷಕ ಕೊರೊನಾ ಲಸಿಕೆಯನ್ನು ಬಿಹಾರ ರಾಜ್ಯಕ್ಕೆ ಉಚಿತವಾಗಿ ನೀಡುವ ಭರವಸೆ ನೀಡಿರುವ ನಮ್ಮ ರಾಜ್ಯದ ರಾಜ್ಯಸಭಾ ಸದಸ್ಯೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಔದಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವುರಾ ನಳಿನ್ ಕುಮಾರ್ ಕಟೀಲ್ ಅವರೇ
ನಮ್ಮ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರ ಮನವೊಲಿಸಿ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಕೊರೊನಾದಿಂದ ಭೀತಿಗೊಳಗಾಗಿರುವವರಿಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಕೊಡಿಸುವ ಧಮ್ ನಿಮಗಿದೆಯೇ ಕಟೀಲ್ ಅವರೇ? ಎಂದು ಪ್ರಶ್ನಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










