ಕೊರೊನಾ ಹರಡುವಿಕೆಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯಂತೆ ಮಾರ್ಚ್22 ರ ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿರಲಿದೆ. ಈಗಾಗಲೇ ಜನತಾ ಕರ್ಫ್ಯೂವಿಗೆ ಹಲವು ಸಂಘನಟೆಗಳು, ಸಂಸ್ಥೆಗಳು ಬೆಂಬಲ ಘೋಷಿಸಿವೆ. ಹಾಗಾದ್ರೆ ಯಾವೆಲ್ಲಾ ಸೇವೆಗಳು ಇರಲಿವೆ, ಯಾವ ಸೇವೆಗಳು ಲಭ್ಯವಿರುವುದಿಲ್ಲ ಎಂಬುದನ್ನು ನೋಡೋದಾದ್ರೆ..
ಲಭ್ಯವಿರದ ಸೇವೆಗಳು..
ರಾಜ್ಯಾದ್ಯಂತ ಹೋಟೆಲ್ ಗಳು, ಮಾರ್ಕೆಟ್ ಗಳು, ಓಲಾ ಉಬರ್ ಸೇವೆಗಳು, ಸರ್ಕಾರಿ ಬಸ್ ಸಂಚಾರ, ಖಾಸಗಿ ಬಸ್ ಗಳು, ಮೆಟ್ರೋ, ಗೂಡ್ಸ್ ಹೊತ್ತೊಯ್ಯುವ ಲಾರಿ, ಟೆಂಪೋಗಳು ಸಂಚರಿಸುವುದಿಲ್ಲ. ಬಾರ್ ಮತ್ತು ವೈನ್ ಶಾಪ್ ಗಳು, ಮಾಲ್ ಗಳು, ಪೆಟ್ರೋಲ್ ಬಂಕ್ ಗಳು, ಥಿಯೇಟರ್ ಗಳು ಬಂದ್ ಆಗಲಿರವೆ. ಶಾಲಾ-ಕಾಲೇಜುಗಳು ಎಂದಿನಂತೆ ಮುಚ್ಚಿರಲಿವೆ. ಒಂದೇ ಮಾತಿನಲ್ಲಿ ಹೇಳುವುದಾದರೇ ಭಾನುವಾರ ಇಡೀ ದೇಶವೇ ಸ್ತಬ್ಧವಾಗಲಿದೆ.
ಲಭ್ಯವಿರಲಿರುವ ಸೇವೆಗಳು..
ಆಸ್ಪತ್ರೆಗಳು, ಪೊಲೀಸ್ ಸ್ಟೇಷನ್ ಗಳು, ಸಾರ್ವಜನಿಕ ಸೇವೆಗೆ ಲಭ್ಯವಿರಲಿವೆ. ಮೆಡಿಕಲ್ ಶಾಪ್ ಗಳು ತೆರೆದಿರಲಿವೆ. ಆಯಂಬುಲೆನ್ಸ್ ಸೇವೆ ಎಂದಿನಂತೆ ಇರಲಿದೆ. ಸಣ್ಣ ಸಣ್ಣ ದಿನಸಿ ಅಂಗಡಿಗಳು ತೆರೆದಿರುತ್ತವೆ.








