kiccha sudeep
ಸ್ಯಾಂಡಲ್ ವುಡ್ ಸ್ಟಾರ್ ನಟರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋದು ಹೊಸ ವಿಚಾರವೇನಲ್ಲ. ಇಂತಹ ಕಾರ್ಯಗಳಲ್ಲಿ ಕಿಚ್ಚ ಸುದೀಪ ಅವರು ಮುಂಚೂಣಿಯಲ್ಲಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ನಿಂದ ಆಗಾಗ ಸಮಾಜಮುಖಿ ಕಾರ್ಯಗಳನ್ನ ನಡೆಸಲಾಗುತ್ತೆ. ಈ ಮೂಲಕ ಅನೇಕ ಬಡಬಗ್ಗರಿಗೆ ನೆರವಾಗುತ್ತೆ ಕಿಚ್ಚನ ಚಾರಿಟೇಬಲ್ ಟ್ರಸ್ಟ್. ಅಂತಯೇ ಇದೀಗ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ವತಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ವಿಜೇತರನ್ನು ಪ್ರಕಟಿಸಲಾಗಿದೆ.
ಮೊಮ್ಮಗನನ್ನ ಪ್ರೀತಿಯಿಂದ ಈ ಹೆಸರಿನಿಂದ ಕರೆಯುತ್ತಾರಂತೆ ಸುಂದರ್ ರಾಜ್..!
‘ಕನ್ನಡ ಸಿನಿಮಾ ಮತ್ತು ಕನ್ನಡ ಸಂಸ್ಕೃತಿ’ ವಿಷಯದಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ನಟ ಸುದೀಪ್ ಶುಭ ಹಾರೈಸಿದ್ದಾರೆ. ”ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ 304 ಜನ ವಿದ್ಯಾರ್ಥಿಗಳಿಗೆ ಅಭಿನಂದನೆ, “ಕನ್ನಡ ಸಿನಿಮಾ ಮತ್ತು ಕನ್ನಡ ಸಂಸ್ಕೃತಿ” ಎಂದೆಂದಿಗೂ ನನ್ನ ಉಸಿರು. #ಮೊದಲು_ಮಾನವನಾಗು” ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ನಟ ಚಂದು ಗೌಡ
ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅಪೂರ್ವ ಕೆಎಂ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಭವ್ಯ ಕೆಬಿ ದ್ವಿತೀಯ ಬಹುಮಾನ ಪಡೆದಿದ್ದರೆ ಚಂದನ ತೃತೀಯ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ಪ್ರಥಮ ಬಹುಮಾನಕ್ಕೆ 20 ಸಾವಿರ ನಗದು, ಎರಡನೇ ಬಹುಮಾನಕ್ಕೆ 15 ಸಾವಿರ ನಗದು ಹಾಗೂ ಮೂರನೇ ಬಹುಮಾನಕ್ಕೆ 10 ಸಾವಿರ ನಗದು ನೀಡಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗಿದೆ.
kiccha sudeep
ದರ್ಶನ್ ರೋಡ್ ಶೋನಲ್ಲಿ ನಟಿ ಅಮೂಲ್ಯ ಭಾಗಿ
ಮತಕ್ಕಾಗಿ `ಗಜ’ ಸಂಚಾರ : ಸಾಮಾಜಿಕ ಅಂತರ ಎಲ್ಲಿ ‘ಸ್ವಾಮಿ’..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel