Kamal Hassan
ಖ್ಯಾತ ಬಹುಭಾಷಾ ನಟ ಕಮ್ ರಾಜಕಾರಣಿಯಾಗಿರುವ ಕಮಲ್ ಹಾಸನ್ ಸದ್ಯ ‘ವಿಶ್ವರೂಪಂ-2’ ಚಿತ್ರದ ಬಳಿಕ ‘ಇಂಡಿಯನ್ – 2’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಶಂಕರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಇದರ ಬೆನ್ನಲ್ಲೇ ಕಮಲ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಹೌದು.. ರಾಜಕೀಯ ಹಾಗೂ ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕಮಲ್ ಹಾಸನ್ ಅವರು ಇದೀಗ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಆದ್ರೆ ಈ ವಿಚಾರ ಹೊಸದೇನಲ್ಲ. ಆದ್ರೆ ಕಮಲ್ ಹಾಸನ್ ನಟನೆಯ 232ನೇ ಸಿನಿಮಾಗೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಲಿದ್ದಾರೆ. ಇನ್ನೂ ನವೆಂಬರ್ 7 ರಂದು ಕಮಲ್ ಹಾಸನ್ ಅವರ 66ನೇ ಹುಟ್ಟುಹಬ್ಬದ ಪ್ರಯುಕ್ತ, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎಂಬುದೇ ಇಲ್ಲಿ ಹೊಸ ವಿಚಾರ.
ಸದ್ಯ ಕಮಲ್ ಬರ್ತ್ ಡೇ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ. ಕಮಲ್ ಅವರ 232ನೇ ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಈ ಸಿನಿಮಾವೊಂದು ರಾಜಕೀಯ ಥ್ರಿಲ್ಲರ್ ಚಿತ್ರವಾಗಿದೆ ಎಂದೇ ಹೇಳಲಾಗ್ತಿದೆ. ಪ್ರಸ್ತುತ ಕಮಲ್ ಹಾಸನ್ ಅವರು ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇಂಡಿಯನ್ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಕುಲ್ ಪ್ರೀತ್ ಸಿಂಗ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಇತ್ತ ಲೋಕೇಶ್ ಕನಕರಾಜ್ ಅವರು ವಿಜಯ್ ನಟನೆಯ ‘ಮಾಸ್ಟರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
Kamal Hassan
ಸಂಗೀತ ದಿಗ್ಗಜ ಎ.ಆರ್ ರೆಹಮಾನ್ ಅವರ ಸಂಗೀತಕ್ಕೆ ಧ್ವನಿಯಾಗುತ್ತಿದ್ದಾರೆ ಧನುಷ್..!
5 ವರ್ಷಗಳ ಬಳಿಕ ಸೂಪರ್ ಹಿಟ್ ಸಿನಿಮಾ “ರಂಗಿತರಂಗ” ರೀ ರಿಲೀಸ್ ..!
ಯಶ್ – ರಾಧಿಕಾ ಮಗನ ಮೊದಲನೇ ವರ್ಷದ ಹುಟ್ಟುಹಬ್ಬ : ಮಗನಿಗೆ ವಿಶೇಷವಾಗಿ ವಿಷ್ ಮಾಡಿದ ರಾಧಿಕಾ
ದುರ್ಬಲ ಮನಸ್ಸಿನ ನೆಹರುಗಾಗಿ ಪಟೇಲರು ಪ್ರಧಾನಿ ಹುದ್ದೆ ತ್ಯಾಗ ಮಾಡಿದರು : ಕಂಗನಾ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel