Pakisthan
ಇಡೀ ದೇಶವೇ ಬೆಚ್ಚಿ ಬಿದ್ದದ್ದ ಪುಲ್ವಾಮಾ ದಾಳಿ ಮಾಡಿಸಿದ್ದು ನಾವೇ ಎಂಬುದನ್ನ ಇಡೀ ಅಸೆಂಬ್ಲಿ ಅಲ್ಲಿ ರಾಜಾರೋಷವಾಗಿ ಬಾಯಿ ಬಡೆದುಕೊಂಡಿದ್ದ ಪಾಕ್ ಸಚಿವನಿಗೆ ಪಾಕ್ ಪ್ರದಾನಿ ಇಮ್ರಾನ್ ಖಾನ್ ಸಮನ್ಸ್ ಜಾರಿ ಮಾಡಿದ್ದಾರೆ. ಹೌದು 40 ಭಾರತೀಯ ಯೋಧರು ಹುತಾತ್ಮರಾಗಿದ್ದ ಕರಾಳ ಘಟನೆಗೂ ನಮಗೂ ಸಂಬಂಧವೇ ಇಲ್ಲ ಎಂದು ಬಾಯಿ ಬಾಯಿ ಬಡೆದುಕೊಂಡಿದ್ದ ಪಾಕ್ ನ ಅಸಲೀ ಮುಖವಾಡವನ್ನ ಇಡೀ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದು ಪಾಕ್ ಸಚಿವ ಫವಾದ್ ಚೌಧರಿ.
ಪಾಕಿಸ್ತಾನ ನ್ಯಾಶನಲ್ ಅಸೆಂಬ್ಲಿಯಲ್ಲಿ ರಾಜಾರೋಶವಾಗಿ ಪುಲ್ವಾಮಾ ದಾಳಿ ಸತ್ಯ ಬಿಚ್ಚಿಟ್ಟಿದ್ದ ಸಚಿವ ಫವಾದ್ ಚೌಧರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಮನ್ಸ್ ನೀಡಿದ್ದಾರೆ. ಪುಲ್ವಾಮಾ ದಾಳಿಯನ್ನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಯಶಸ್ವಿಯಾಗಿ ಮುಗಿಸಿದ್ದಾರೆ. ಹಿಂದೂಸ್ಥಾನ ನೆಲಕ್ಕೆ ನುಗ್ಗಿ ದಾಳಿ ಮಾಡುವ ಛಾತಿ ಇಮ್ರಾನ್ ಖಾನ್ ಆಡಳಿತದ ಯಶಸ್ಸು ಎಂದು ಹೇಳುವ ಮೂಲಕ ತಾವೇನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ನೀಚ ಆಡಳಿತ ವೈಖರಿಯನ್ನ ಹೊಗಳಿದ್ದ ಫವಾದ್ ಪಾಕಿಸ್ತಾನದ ಅಸಲಿಯತ್ತನ್ನ ವಿಶ್ವದ ಮುಂದೆ ತೋರಿಸಿ ದೇಶಕ್ಕೆ ಮುಖಭಂಗ ಆಗುವಂತೆ ಮಾಡಿದ್ದರು.
ಈ ಅಧಿಕೃತ ಹೇಳಿಕೆ ಪ್ರಧಾನಿ ಇಮ್ರಾನ್ ಖಾನ್‌ಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಇದೀಗ ಪಾಕಿಸ್ತಾನವನ್ನ ಇಕ್ಕಟ್ಟಿಗೆ ಸಿಲುಕಿಸಿದ ಫವಾಧ್ ಚೌದರಿ ವಿರುದ್ಧ ಪಾಕ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಸೂಚಿಸಿದ್ದಾರೆ. ಇದಷ್ಟೇ ಅಲ್ಲದೇ ಇನ್ಮುಂದೆ ಪುಲ್ವಾಮಾ ದಾಳಿ, ಭಾರತ ಹಾಗೂ ಪಾಕಿಸ್ತಾನ ಗಡಿ ಸಮಸ್ಯೆಗಳ ಕುರಿತು ಯಾವುದೇ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.
ಮೊದಲೇ ವಿಶ್ವದ ಮುಂದೆ ಮುಖಭಂಗಕ್ಕೀಡಾಗಿರುವ ಪಾಕಿಸ್ತಾಕ್ಕೆ ಮತ್ತಷ್ಟು ಹೀನಾಯ ಸ್ಥಿತಿ ಬಂದೀತೇನೋ ಎಂಬ ಆತಂಕದಲ್ಲಿ ಪಾಕ್ ಸರ್ಕಾರ ಪುಲ್ವಾಮಾ ದಾಳಿ ಬಗ್ಗೆ ಮಾತನಾಡದಂತೆ ಸೂಚನೆ ನೀಡಿದೆ ಎಂಬುದು ಸದ್ಯ ಚರ್ಚೆಗೆ ಟೀಕೆಗೆ ಆಕ್ರೋಶಕ್ಕೆ ಗುರಿಯಾಗಿರೋದಂತು ಸುಳ್ಳಲ್ಲ.
ಬಕೆಟ್ ರಾಜಕಾರಣಿ ನಾನಲ್ಲ : ಸ್ವಪಕ್ಷದರಿಗೆ ಟಾಂಗ್ ಕೊಟ್ರಾ ಸಿ.ಟಿ.ರವಿ
Pakisthan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channe