17 ವರ್ಷದ ಬಾಲಕಿಯನ್ನು ಮದುವೆಯಾದ 78 ವರ್ಷದ ವ್ಯಕ್ತಿ – 22 ದಿನಗಳ ನಂತರ ವಿಚ್ಛೇದನಕ್ಕೆ ಅರ್ಜಿ 78 old married teenager
ಜಕಾರ್ತಾ, ನವೆಂಬರ್05: ಇಂಡೋನೇಷ್ಯಾದ 78 ವರ್ಷದ ವ್ಯಕ್ತಿಯೊಬ್ಬ 17 ವರ್ಷದ ಬಾಲಕಿಯನ್ನು ಮದುವೆಯಾಗಿ, 22 ದಿನಗಳ ನಂತರ ಬೇರೆಯಾಗಲು ನಿರ್ಧರಿಸಿದ್ದಾನೆ. ಕಳೆದ ತಿಂಗಳು ವಿವಾಹವಾದ ಅಬಾ ಸರ್ನಾ (78) ಮತ್ತು ಆತನ ಪತ್ನಿ ನೋನಿ ನವಿತಾ (17) ದಂಪತಿಗಳು ಕಳೆದ ವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 78 old married teenager

ನವವಿವಾಹಿತರು ತಮ್ಮ ಅಪಾರ ವಯಸ್ಸಿನ ವ್ಯತ್ಯಾಸದಿಂದಾಗಿ ಸಾಕಷ್ಟು ಸುದ್ದಿಯಾಗಿದ್ದರು.
ಅವರಿಬ್ಬರ ನಡುವೆ ಯಾವುದೇ ಸಮಸ್ಯೆಗಳು ಇರದೆ ಇದ್ದರೂ ಅಬಾ ಸರ್ನಾ, ನೋನಿಗೆ ವಿಚ್ಛೇದನ ಪತ್ರವನ್ನು ಕಳುಹಿಸಿದ್ದು, ನೋನಿ ಕುಟುಂಬಕ್ಕೆ ಅಘಾತ ತಂದಿದೆ.
ನೋನಿಯ ಸಹೋದರಿ ಇಯಾನ್, ನಮ್ಮ ಕುಟುಂಬಕ್ಕೆ ಅಬಾ ಸರ್ನಾ ಅವರೊಂದಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಅಬಾ ಸರ್ನಾ ಮತ್ತು ಅವರ ಕುಟುಂಬದಿಂದ ಈ ಸಮಸ್ಯೆ ಬಂದಿದ್ದು, ಅಬಾ ಸರ್ನಾ ಕುಟುಂಬ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಅವರು ಹೇಳಿದ್ದಾರೆ.
ಮಿಲಿಟರಿ ಸುಧಾರಣೆಗಳು : ಹೊಸ ಪಿಂಚಣಿ ಯೋಜನೆ, ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ
ತಮ್ಮ ಮದುವೆಗೆ ಮೊದಲು ನೋನಿ ಗರ್ಭಿಣಿಯಾಗಿದ್ದರಿಂದ ದಂಪತಿಗಳು ಬೇರೆಯಾದರು ಎಂಬ ಆರೋಪಗಳು ಕೇಳಿಬಂದಿದ್ದು, ಇಯಾನ್ ಇದನ್ನು ನಿರಾಕರಿಸಿದ್ದಾರೆ.
ಅಬಾ ಅವರು ಮೋಟಾರ್ ಸೈಕಲ್, ಹಾಸಿಗೆ ಮತ್ತು ಕ್ಲೋಸೆಟ್ ಜೊತೆಗೆ ಆರ್’ಎಂ ( RM) 2,819 (ರೂ. 50,000) ಅನ್ನು ನೋನಿಗೆ ನೀಡಿದ್ದರು. ಟ್ರಕ್ ಮೂಲಕ ವರದಕ್ಷಿಣೆ ಸಾಗಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿತ್ತು.

ಮತ್ತೊಂದು ಘಟನೆಯಲ್ಲಿ, ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ಇಬ್ಬರೂ ಗೆಳತಿಯರನ್ನು ಏಕ ಸಮಯದಲ್ಲಿ ಮದುವೆಯಾಗಿದ್ದಾನೆ. ಅವರನ್ನು ನೋಯಿಸಲು ಬಯಸದ ಅವನು ಇಬ್ಬರನ್ನೂ ವಿವಾಹವಾಗಿದ್ದು, ಆ ವ್ಯಕ್ತಿ ವಧುವಿನ ಕುಟುಂಬಗಳಿಗೆ ವರದಕ್ಷಿಣೆ ರೂಪದಲ್ಲಿ ಒಂದು ಸುಂದರವಾದ ಮೊತ್ತವನ್ನು ಪಾವತಿಸಿದ್ದ.
ಇಂಡೋನೇಷ್ಯಾದಲ್ಲಿ, ವರನು ವಧುವಿನ ಕುಟುಂಬಕ್ಕೆ ವರದಕ್ಷಿಣೆ ನೀಡುವುದು ಸಾಮಾನ್ಯ ಕ್ರಮವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಡಾ. ರಾಜ್ ಕುಮಾರ್ ಬಾಲಕೃಷ್ಣ ರವರ ಕಾಲಿಗೆ ಅಡ್ಡ ಬಿದ್ದು ಕ್ಷಮೆಯಾಚಿಸಲು ಕಾರಣವಾದ ಆ ಘಟನೆhttps://t.co/Jarz6CPy3j
— Saaksha TV (@SaakshaTv) November 5, 2020
ವಿವಾಹ ವಿಚ್ಛೇದನ ಪಡೆದರೂ ಪತ್ನಿ ಮತ್ತು ಮಕ್ಕಳಿಗೆ ಪತಿಯು ಪಾಲನೆ ಭತ್ಯೆ ನೀಡಬೇಕು – ಅಲಹಾಬಾದ್ ಹೈಕೋರ್ಟ್https://t.co/qTRz4BW2XO
— Saaksha TV (@SaakshaTv) November 5, 2020








