ADVERTISEMENT
Saturday, May 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರೈತರೊಂದಿಗೆ ಟ್ರ್ಯಾಕ್ಟರ್ ಚಲಾಯಿಸಿ ಬಿತ್ತನೆ ಮಾಡಿ ಬರ್ತ್ ಡೇ ಆಚರಿಸಿಕೊಂಡ ಬಿ.ಸಿ ಪಾಟೀಲ್

Kariyappa N by Kariyappa N
November 15, 2020
in Newsbeat, Politics, Samagra karnataka, ರಾಜ್ಯ
farmres day
Share on FacebookShare on TwitterShare on WhatsappShare on Telegram

ಮಂಡ್ಯ: ನನ್ನ ಹುಟ್ಟುಹಬ್ಬ ಆಚರಿಸಲು ರೈತರಿಗೊಂದು ದಿನ ಆರಂಭಿಸಿಲ್ಲ. ರೈತರ ಶಕ್ತಿಗಾಗಿ ರೈತರ ದಿನ ಆರಂಭಿಸಿದ್ದೇನೆ. ರೈತರ ಕಷ್ಟನಷ್ಟ ಅರಿಯಲು ಅನುಭವ ಅರಿಯಲು ಸಮಸ್ಯೆಗೆ ಪರಿಹಾರ ಏನೆಂಬುದನ್ನು ಅರಿಯಲು ಮಂಡ್ಯಕ್ಕೆ ಬಂದಿದ್ದೇನೆ. ರೈತರ ಶಕ್ತಿಯಾಗಲು ಬಯಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಮಂಡ್ಯದ ಮಡುವಿನ ಕೋಡಿಯಲ್ಲಿ ಧಾನ್ಯದ ರಾಶಿಗೆ ಪೂಜೆ ನೆರವೇರಿಸುವ ಮೂಲಕ “ರೈತರೊಂದಿಗೊಂದು ದಿನ” ವೇದಿಕೆ ಉದ್ಘಾಟಿಸಿ ಮಾತನಾಡಿದ ಬಿ.ಸಿ ಪಾಟೀಲ್, ಸರ್ಕಾರ ರೈತರ ಮನೆಗೆ ಬರಬೇಕೇ ವಿನಃ, ರೈತ ಸರ್ಕಾರದ ಹತ್ತಿರ ಹೋಗಿಲ್ಲ. ಟ್ರ್ಯಾಕ್ಟರ್ ಚಲಾವಣೆ ಮಾಡಿ, ಬಿತ್ತನೆ ಮಾಡಿ ಕೆಸರಿನಲ್ಲಿ ಕಾಲಿಟ್ಟಿದ್ದೇವೆ. ಇದು ಯಾರೂ ಮಾಡುವುದಿಲ್ಲ ಎಂದಲ್ಲ. ಇತರರಿಗೂ ಕೃಷಿಗೆ ಸ್ಫೂರ್ತಿಯಾಗಲಿ ಎಂಬ ಉದ್ದೇಶವಿದೆ ಎಂದರು.


ಇನ್ನೊಬ್ಬರಿಗೆ ಗುಲಾಮರಾಗಿ ಹೋಗುವುದಕ್ಕಿಂತ ಕೃಷಿ ಭೂಮಿಯಿದ್ದಾಗ ಹೊಲದಲ್ಲಿ ಒಡೆಯನಾಗಿ ದುಡಿಯುವುದೇ ಪುಣ್ಯ. ಕೋವಿಡ್ ಸಾಕಷ್ಟು ಪಾಠ ಕಲಿಸಿದೆ, ಯುವಕರ ಉತ್ಸಾಹ ಕೃಷಿ ಉದ್ಯಮ ರೈತೋದ್ಯಮವಾಗಬೇಕು. ಸಮಗ್ರ ಕೃಷಿಯತ್ತ ಆಹಾರ ಸಂಸ್ಕರಣೆಯಾಗಬೇಕು. ಆತ್ಮನಿರ್ಭರ್ ಯೋಜನೆಯಡಿ ಅನುದಾನವನ್ನು  ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಂಘಗಳು ಆಹಾರ ಸಂಸ್ಕರಣಾ ಘಟಕ ಮಾಡಿದರೆ, ಅವುಗಳಿಗೆ ಸರ್ಕಾರ ಅನುದಾನದ ಸಹಕಾರ ನೀಡುತ್ತದೆ. ಮಧ್ಯವರ್ತಿಗಳನ್ನು ಬಿಟ್ಟು ರೈತ ಯುವಕರು ನೇರ ಮಾರ್ಕೆಟಿಂಗ್ ಮಾಡಬೇಕು. ಬರೀ ಬೆಳೆ ಬೆಳೆದರೆ ಸಾಲದು.ನಮ್ಮ ಬೆಳೆಗೆ ನಾವೇ ಮಾರ್ಕೆಟಿಂಗ್ ಮಾಡಬೇಕು ಎಂದು ಬಿ.ಸಿ ಪಾಟೀಲ್ ಸಲಹೆ ನೀಡಿದರು.

Related posts

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

May 16, 2026
ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

May 16, 2026

ಮಂಡ್ಯದಲ್ಲಿ ನೀರಾವರಿ ಇದೆ. ಬರೀ ಕಬ್ಬು ಭತ್ತವನ್ನೇ ನೆಚ್ಚಿಕೊಂಡರೆ ಸಾಲದು. ಸಮಗ್ರ ಕೃಷಿಯತ್ತ ಮಂಡ್ಯದ ರೈತರು ಮುಂದಾಗಬೇಕು. ಭತ್ತದ ಜೊತೆ ಇತರೆ ಕೃಷಿಯನ್ನು ಮಾಡಬೇಕು. ಮಿಶ್ರಬೆಳೆ ಬೆಳೆಯಬೇಕು. ನೀರೇ ಬರದ ಕೋಲಾರದಲ್ಲಿ ಸಮಗ್ರ ಕೃಷಿ ಅಳವಡಿಸಿ ನೇರ ಮಾರ್ಕೆಟಿಂಗ್ ಮಾಡಿ ನಾವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಅದರಂತೆ ಮಂಡ್ಯದವರು ಆತ್ಮವಿಶ್ವಾಸಿಗಳಾಗಬೇಕು. ವಾಣಿಜ್ಯ ಬೆಳೆ, ಸಾವಯವ ಬೆಳೆ, ದ್ವಿದಳ ಧಾನ್ಯ ಸಮಗ್ರ ಕೃಷಿಯನ್ನು ಮಂಡ್ಯ ರೈತರು ಮಾಡಲಿ ಎಂದು ಬಿ.ಸಿ.ಪಾಟೀಲ್ ರೈತರಿಗೆ ಕಿವಿಮಾತು ಹೇಳಿದರು.
ನನ್ನ ಜನ್ಮದಿನವನ್ನು ರೈತರೊಂದಿಗೆ ಕಳೆಯಬೇಕೆಂದು ತೀರ್ಮಾನಿಸಿ ರೈತರೊಂದಿಗೊಂದು ದಿನ ಆರಂಭಿಸಿದೆ.  ಯಾವ ಜನ್ಮದ ಪುಣ್ಯವೋ, ಕೆ.ಆರ್.ಪೇಟೆಯಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿದೆ. ಮಂಡ್ಯ ಜನರ ಪ್ರೀತಿ ಮರೆಯಲು ಸಾಧ್ಯವೇ ಇಲ್ಲ ಎಂದು ಸಂತಸ ವ್ತಕ್ತಪಡಿಸಿದರು.

day with farmres
ನನಗೂ ಮಂಡ್ಯಕ್ಕೂ ಅವಿನಾಭಾವ ನಂಟಿದೆ. 1999ರಲ್ಲಿ ಬಂದ ಕೌರವ ಚಿತ್ರ ಮಂಡ್ಯದಿಂದ ಆರಂಭವಾಗಿತ್ತು. ಯಡಿಯೂರಪ್ಪ ಹುಟ್ಟಿದ ತಾಲೂಕು ಕೆ.ಆರ್.ಪೇಟೆ. ಯಡಿಯೂರಪ್ಪ ಅವರ ಕನಸನ್ನು ನನಸು ಮಾಡಲು ನಾನು ನಾರಾಯಣಗೌಡ ಪ್ರಯತ್ನಿಸಿ ದುಡಿಯುತ್ತಿದ್ದೇವೆ ಎಂದರು.
ಬೇರೆ ಉದ್ಯಮಗಳಂತೆ ರೈತ ವರ್ಕ್ ಫ್ರಮ್ ಹೋಮ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಲಾಕ್‍ಡೌನ್ ಸಂಕಷ್ಟದಲ್ಲಿ ರೈತನ ಸಂಕಷ್ಟವನ್ನು ಅರಿತು ನನ್ನೊಂದಿಗೆ ನಾರಾಯಣಗೌಡ ಶ್ರಮಿಸಿದ್ದಾರೆ. ಕೃಷಿ ಎಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚು ಪ್ರಮುಖವಾಗಿದೆ. ಎಂದಿಗೂ ನಿಲ್ಲಿಸದ ಕಾಯಕ ಕೃಷಿ. ಲಾಕ್‍ಡೌನ್ ವೇಳೆ ಕೃಷಿಕರಿಗೆ ನಿಬರ್ಂಧ ಹಾಕಿದ್ದರೆ ಇಂದಿಗೆ ತಿನ್ನಲು ಅನ್ನ ಸಿಗುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರ ಬಿತ್ತನೆ ಹೆಚ್ಚಾಗಿದೆ. ಯಡಿಯೂರಪ್ಪ ಕಾಲ್ಗುಣದಿಂದ ಹೆಚ್ಚು ಮಳೆಯಾಗಿದೆ. ಈ ಬಾರಿ ಶೇ.106ಕ್ಕೂ ಹೆಚ್ಷು ಬಿತ್ತನೆಯಾಗಿದೆ ಎಂದು ಬಿ.ಸಿ.ಪಾಟೀಲ್ ವಿವರ ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮನಂತೆ ರೈತ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಸ್ಫೂರ್ತಿಯಾಗಬೇಕು.ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ರಾಜ್ಯದಲ್ಲಿ ಸದ್ಯ ಒಟ್ಟು 242 ಮಣ್ಣಿನ ಪರೀಕ್ಷಾ ಕೇಂದ್ರಳಿವೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೊಂದು ಮಣ್ಣು ಪರೀಕ್ಷಾ ಕೇಂದ್ರ ಆರಂಭಿಸುವ ಚಿಂತನೆ ನಡೆಸಲಾಗಿದೆ ಎಂದರು.


ಯಾವುದೇ ಸಾಫ್ಟವೇರ್ ಆಗಲೀ ಅಥವಾ ನಗರದಲ್ಲಿ ಇರುವವರಾಗಲೀ ವೀಕೆಂಡ್ ಅಗ್ರಿಕಲ್ಚರ್ ಫ್ಯಾಷನ್ ಆರಂಭಿಸಿ. ಕೃಷಿಯತ್ತ ಆಕರ್ಷಕ ಹವ್ಯಾಸ ಮೂಡಿಸಿಕೊಳ್ಳಬೇಕೆಂದರು. ವೈಜ್ಞಾನಿಕ ಪದ್ಧತಿ, ತಂತ್ರಜ್ಞಾನ ಅಳವಡಿಸಿ ಹನಿ ನೀರಾವರಿ ಸಮಗ್ರ ಕೃಷಿಗೆ ಹೆಚ್ಚು ಒತ್ತು ನೀಡಬೇಕು. ಎಲ್ಲರೂ ಜೈ ಕಿಸಾನ್ ಎನ್ನುವಂತಾಗಲಿ ಎಂದು ಬಿ.ಸಿ.ಪಾಟೀಲ್ ಹೇಳಿದರು.

ಹೋಬಳಿಯಲ್ಲಿ ರೈತರಿಗೊಂದು ದಿನ
ರೈತರೊಂದಿಗೊಂದು ದಿನ ನನ್ನ ಮತಕ್ಷೇತ್ರ ಕೆ.ಆರ್.ಪೇಟೆಯಿಂದಲೇ ಕೃಷಿ ಸಚಿವರು ಆರಂಭಿಸಿರುವುದು ಖುಷಿಯ ವಿಚಾರ. ಬಿ.ಸಿ.ಪಾಟೀಲರು ಸದಾ ಮೆಚ್ಚುವಂತಹ ತೀರ್ಮಾನವನ್ನೇ ಕೈಗೊಳ್ಳುತ್ತಾರೆ ಎಂದು ತೋಟಗಾರಿಕೆ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಪ್ರಗತಿಪರ ರೈತ ಮಹಿಳೆ ಲಕ್ಷ್ಮಿದೇವಮ್ಮ ಜಿಲ್ಲೆಯಲ್ಲಿ ಸಮಗ್ರ ಕೃಷಿ ಮಾಡಿ ಮಾದರಿಯಾಗಿದ್ದಾರೆ. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳು ಸಿಕ್ಕೇ ಸಿಗಲಿವೆ. ಆದರೆ ಅದನ್ನೇ ನೆಚ್ಚಿಕೊಂಡು ಪ್ರಯತ್ನ ಮಾಡುವುದನ್ನು ಬಿಡಬಾರದು. ಲಾಕ್‍ಡೌನ್ ಸಂದರ್ಭದಲ್ಲಿ ತರಕಾರಿ ಮಾರಾಟ ಸಾಗಾಣೆಗೆ ತೊಂದರೆಯಾಗದಂತೆ ನೋಡಿಕೊಂಡೆ. ತರಕಾರಿ ರಫ್ತು ಬರೀ ಎಂಟು ತಿಂಗಳಿನಲ್ಲಿ ಶೇ.2.5 ರಿಂದ 5.5ಕ್ಕೆ ಏರಿದೆ.
ಬಿ.ಸಿ ಪಾಟೀಲ್ ಅವರು ಲಾಕ್‍ಡೌನ್ ಸಂದರ್ಭದಲ್ಲಿ ದುಡಿದು ಸರ್ಕಾರಕ್ಕೆ ರೈತರಿಗೆ ಶಕ್ತಿತಂದಿದ್ದಾರೆ. ನಮ್ಮದು ಮಳೆ ಬಿಸಿಲಿನ ಕೆಲಸ. ಅಧಿಕಾರಿಗಳು ಬಹಳ ಉತ್ಸುಕರಾಗಿ ಕೆಲಸ ಮಾಡುತ್ತಿರುವುದು ಮೆಚ್ಚುಗೆ ವಿಷಯ. ತೋಟಗಾರಿಕೆ ಮತ್ತು ಕೃಷಿ ಅಣ್ಣ-ತಮ್ಮ ಇಲಾಖೆಗಳಿದ್ದಂತೆ. ಮುಖ್ಯಮಂತ್ರಿಗಳ ಹೋಬಳಿಯಲ್ಲಿ ರೈತರಿಗೊಂದು ದಿನ ಕಾರ್ಯಕ್ರಮ ಮಾಡಿದ್ದು ಸಂತಸ ತಂದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ರೈತರು ಹಾಗೂ ಕುಟುಂಬಸ್ಥರೊಡನೆ ಕೇಕ್ ಕತ್ತರಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ 65ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕೃಷಿ ಸಾಧಕಿ ವಿತಾ ಮಿಶ್ರಾ ಅವರನ್ನು ಸನ್ಮಾನಿಸಲಾಯಿತು. ಕೃಷಿ ನಿರ್ದೇಶಕ ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು.
ಶಾಸಕ ಶ್ರೀನಿವಾಸ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ರಾಜೇಂದ್ರ ಪ್ರಸಾದ್, ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್, ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್, ತೋಟಗಾರಿಕಾ ನಿರ್ದೇಶಕ ವೆಂಕಟೇಶ್, ರಾಜ್ಯದ ಎಲ್ಲಾ ಜಂಟಿ ನಿರ್ದೇಶಕರು ಜಿ.ಪಂ.ಅಧ್ಯಕ್ಷೆ ನಾಗರತ್ನ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: AgricultureB C PatilBirthdayc patilfarmers dayHorticulturemandya. b
ShareTweetSendShare
Join us on:

Related Posts

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

ಯೋಗಿ ದಾರಿಯಲ್ಲಿ ಸುವೆಂದು ಅಧಿಕಾರಿ : ಅಕ್ರಮ ಅತಿಕ್ರಮಣಕಾರರ ಎಡೆಮುರಿ ಕಟ್ಟಲು ಸನ್ನದ್ಧವಾದ ಬುಲ್ಡೋಜರ್ ಪಡೆ

by Shwetha
May 16, 2026
0

ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ. ದಶಕಗಳ ಕಾಲ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಪತನಗೊಂಡಿದ್ದು, ಬಿಜೆಪಿ ಐತಿಹಾಸಿಕ ಜಯಭೇರಿ...

ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

ನಟ ದರ್ಶನ್‌ಗೆ ಸುಪ್ರೀಂ ಶಾಕ್..! ಇನ್ನೂ ಒಂದು ವರ್ಷ ಜೈಲು ಜೀವನ?

by Shwetha
May 16, 2026
0

ದರ್ಶನ್ ತೂಗುದೀಪ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆ ಎದುರಾಗಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ತಾತ್ಕಾಲಿಕವಾಗಿ ಬಿಡುಗಡೆಯ...

ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ಸರಣಿ ಪ್ರತಿಭಟನೆಗಳ ಎಚ್ಚರಿಕೆ ನೀಡಿದ ಬಿವೈ ವಿಜಯೇಂದ್ರ

ರಾಜ್ಯ ಸರ್ಕಾರಕ್ಕೆ ಹುಚ್ಚು ಹಿಡಿದಿದೆ: BY ವಿಜಯೇಂದ್ರ ವಾಗ್ದಾಳಿ

by Shwetha
May 16, 2026
0

B. Y. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ಶಾಲಾ ವಸ್ತ್ರಸಂಹಿತೆ ಕುರಿತ ಆದೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಲೆಗಳಲ್ಲಿ ಹಿಜಾಬ್ ಧರಿಸಲು...

ಹಿಂದೂಗಳನ್ನು ಉರಿಸುವುದೇ ಕಾಂಗ್ರೆಸ್ ಅಜೆಂಡಾ : ಅಭಿವೃದ್ಧಿ ಮಾಡದ ಸಿದ್ದರಾಮಯ್ಯ ಡಿಕೆಶಿಗೆ ಮುಖ ಮುಚ್ಚಿಕೊಳ್ಳಲು ಬುರ್ಖಾ ಬೇಕು: ಪ್ರತಾಪ್ ಸಿಂಹ ಆಕ್ರೋಶ

ಹಿಂದೂಗಳನ್ನು ಉರಿಸುವುದೇ ಕಾಂಗ್ರೆಸ್ ಅಜೆಂಡಾ : ಅಭಿವೃದ್ಧಿ ಮಾಡದ ಸಿದ್ದರಾಮಯ್ಯ ಡಿಕೆಶಿಗೆ ಮುಖ ಮುಚ್ಚಿಕೊಳ್ಳಲು ಬುರ್ಖಾ ಬೇಕು: ಪ್ರತಾಪ್ ಸಿಂಹ ಆಕ್ರೋಶ

by Shwetha
May 16, 2026
0

ಮೈಸೂರು: ಕರ್ನಾಟಕದಲ್ಲಿ ಹಿಜಾಬ್ ನಿಷೇಧವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ...

ಸಿದ್ದರಾಮಯ್ಯ ಬಣಕ್ಕೆ ಶಾಕ್: ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನಿಂದ ಡಿಕೆಶಿಗೆ ಮುಂದಿನ ಮುಖ್ಯಮಂತ್ರಿ ಪಟ್ಟ!

ಸಿದ್ದರಾಮಯ್ಯ ಬಣಕ್ಕೆ ಶಾಕ್: ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನಿಂದ ಡಿಕೆಶಿಗೆ ಮುಂದಿನ ಮುಖ್ಯಮಂತ್ರಿ ಪಟ್ಟ!

by Shwetha
May 16, 2026
0

ರಾಜ್ಯ ರಾಜಕಾರಣದ ಚಾಣಕ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು ನಾಡಿನಾದ್ಯಂತ ಅಭಿಮಾನಿಗಳು ಮತ್ತು ಕಾರ್ಯಕರ್ತರು ಈ ಸಂಭ್ರಮವನ್ನು ಹಬ್ಬದಂತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram