ಹಾವೇರಿ: ಪರಪುರುಷರ ಜೊತೆ ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಮಗನೊಬ್ಬ ಆಕೆಯ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗಂಗಿಭಾವಿ ಬಳಿ ಎರಡು ದಿನಗಳ ಹಿಂದೆ ಕೊಲೆ ನಡೆದಿದ್ದು, ಎರಡು ದಿನಗಳ ಬಳಿಕ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಪಾರವ್ವ ಸೋಮಲಪ್ಪ ಲಮಾಣಿ ಎಂಬುವನ್ನು ಪುತ್ರ ಶಿವಪ್ಪ ಸೋಮಲಪ್ಪ ಲಮಾಣಿ(21) ಎಂಬಾತ ಕೊಲೆ ಮಾಡಿದ ಪಾಕಿ ಮಗನಾಗಿದ್ದಾನೆ. ತಾಯಿ ಹಲವರ ಜತೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಈ ವಿಚಾರವಾಗಿ ಮಗ ಸೋಮಲಪ್ಪ ತಾಯಿ ಜತೆ ಹಲವು ಬಾರಿ ಜಗಳ ಮಾಡಿಕೊಂಡಿದ್ದನಂತೆ. ಮಗನ ವಿರೋಧದ ನಡುವೆಯೂ ತಾಯಿ ಪರಪುರುಷರ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಳಂತೆ. ಇದರಿಂದ ಮಾನಸಿಕವಾಗಿ ನೊಂದು ಹೋಗಿದ್ದ ಸೋಮಲಪ್ಪ, ತಾಯಿಗೆ ಮದ್ಯ ಕುಡಿಸಿ ಬಲಾತ್ಕಾರ ಮಾಡಿದ್ದಾನೆ. ಕೊನೆಗೆ ವಿಷಯ ಗೊತ್ತಾಗುತ್ತದೆ ಎಂದು ತಿಳಿದು ತಾಯಿಯನ್ನು ಮರ್ಡರ್ ಮಾಡಿದ್ದಾನೆ. ಶವವನ್ನು ಹಿತ್ತಲಲ್ಲಿ ಎಸೆದು ಆರೋಪಿ ತಲೆ ಮರೆಸಿಕೊಂಡಿದ್ದ.
ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಶಿಗ್ಗಾವಿ ಪೊಲೀಸರು ಮಗನನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸೋಮಲಪ್ಪ ಪೊಲೀಸರ ಮುಂದೆ ತಾನೇ ತಾಯಿಯನ್ನು ಕೊಲೆ ಮಾಡಿರುವ ಸಂಗತಿಯನ್ನು ಒಪ್ಪಿಕೊಂದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








