ಸಿಲಿಕಾನ್ ಸಿಟಿಯಲ್ಲಿ ಪಟಾಕಿ ಸಿಡಿದು ಗಾಯಗೊಂಡ ಮಕ್ಕಳ ಸಂಖ್ಯೆ ಎಷು ಗೊತ್ತಾ..!
ಬೆಂಗಳೂರು: ಪ್ರತಿ ಬಾರಿ ದೇಶಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬ ಆಚರಣೆ ಮಾಡಲಾಗುತ್ತೆ.
ಅಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸೋದು ಕೂಡ ಕಾಮನ್. ಆದ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಪಟಾಕಿ ಸಿಡಿಸುವುದು ಕೊಂಚ ಮಟ್ಟದಲ್ಲಿ ಕಡಿಮೆಯಾಗಿದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಪ್ರವೀಣ್ ಶೆಟ್ಟಿ ವಿರೋಧ
ಆದ್ರೆ ಅವಘಡಗಳು ತಪ್ಪಿಲ್ಲ. ಪ್ರತಿ ಸರತಿ ದೀಪಾವಳಿ ವೇಳೆ ದೇಶಾದ್ಯಂತ ಪಟಾಕಿಯಿಂದಾದ ಅನೇಕ ಅವಘಡಗಳು ವರದಿಯಾಗುತ್ತವೆ.
ಎಷ್ಟೋ ಮಕ್ಕಳು ಕಣ್ಣು ಕಿವಿ ಕಳೆದುಕೊಮಡ ಪ್ರಕರಣಗಳು ಬೆಳಕಿವೆ ಬಂದಿವೆ. ಅದರಂತೆ ಈ ಬಾರಿಯೂ ಪಟಾಕಿ ಅನಾಹುತಗಳು ಸಂಭವಿಸಿವೆ. ಆದರೆ ಕಳೆದೆಲ್ಲಾ ಬಾರಿಗೆ ಹೋಲಿಸಿದ್ರೆ ಪ್ರಮಾಣ ಕಡಿಮೆ ಅಷ್ಟೇ.
ದೇಶ ಅಲ್ಲ ರಾಜ್ಯ ಅಲ್ಲ ಕೇವಲ ಬೆಂಗಳುರು ನಗರದಲ್ಲಿ ಮಾತ್ರವೇ ಕಳೆದೆರೆಡು ದಿನಗಳಲ್ಲಿ 14 ಮಕ್ಕಳು ಸೇರಿ 15 ಜನ ಗಾಯಗೊಂಡಿದ್ದಾರೆ.
ಪಟಾಕಿ ಹಾನಿಗೊಳಗಾಗಿ ತಡರಾತ್ರಿ ಮಿಂಟೋ ಆಸ್ಪತ್ರೆಯಲ್ಲಿಯೇ ಇಬ್ಬರು ಮಕ್ಕಳು, ನಾರಾಯಣ ನೇತ್ರಾಲಯದಲ್ಲಿ 40 ವರ್ಷದ ಮಹಿಳೆ ಚಿಕಿತ್ಸೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಭಾರೀ ಮಳೆ : ವಾಹನ ಸವಾರರ ಪರದಾಟ
ಹೌದು ಬೆಳಕಿನ ಹಬ್ಬ ದೀಪಾವಳಿ ಹಲವು ಮಕ್ಕಳ ಬಾಳನ್ನ ಕತ್ತಲು ಮಾಡಿಬಿಟ್ಟಿದೆ. ಹೌದು, ಒಟ್ಟಾರೇ, ನಗರದಲ್ಲಿ ಹಬ್ಬದ ಮೊದಲ ದಿನ 2 ಮತ್ತು 2ನೇ ದಿನ 13 ಪ್ರಕರಣಗಳು ವರದಿಯಾಗಿದೆ.
ಇನ್ನಾದ್ರೂ ಜನರು ಈ ಬಗ್ಗೆ ಎಚ್ಚರ ವಹಿಸಬೇಕು. ಪಟಾಕಿಗಳನ್ನ ಹಚ್ಚಬೇಕಾದ್ರೆ ಕೊಂಚ ಎಚ್ಚರ ವಹಿಸಬೇಕು.
ಪಟಾಕಿ ಸಿಡಿಸಿ ಶಬ್ಧ ಮಾಲಿನ್ಯ ವಾಯು ಮಾಲಿನ್ಯ ಮಾಡುವ ಬದಲಿಗೆ ದೀಪಗಳನ್ನ ಹಚ್ಚಿ ಸುರಕ್ಷಿತವಾಗಿ ಕಡಿಮೆ ಶಬ್ಧವಿರುವ ಕೆಲ ಕಡಿಮೆ ಮಟ್ಟದ ಅಪಾಯವಿರುವ ಪಟಾಕಿಗಳನ್ನ ಹಚ್ಚಿ ಸಂಭ್ರಮಿಸಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









