ಡಿ.ಕೆ.ಶಿವಕುಮಾರ್ ಅವರೇ ಇನ್ನಾದರೂ ನಮ್ಮ ಪರ ನಿಲ್ಲಿ : ಅಖಂಡ
ಬೆಂಗಳೂರು : ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಸಂಪತ್ ರಾಜ್ ಬಂಧನವಾಗಿದ್ದು, ಈ ಬಗ್ಗೆ ಅಖಂಡ ಶ್ರೀನಿವಾಸ ಮೂರ್ತಿ ನನಗಾದ ಅನ್ಯಾಯಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ.
ಚೀಫ್ ಜಸ್ಟೀಸ್ ಆದೇಶ, ಸ್ವಾಮೀಜಿ ಮನವಿ ಮೇರೆಗೆ ಕ್ರಮ ಆಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್ ಅವರು ನಮ್ಮ ಜೊತೆಯಿದ್ದಾರೆ.
ನನಗೆ ನ್ಯಾಯ ಸಿಗುವ ಭರವಸೆಯಿದೆ. ಮಾಜಿ ಮೇಯರ್ ಸಂಪತ್ ರಾಜ್ ಯಾವುದೇ ತಪ್ಪು ಮಾಡಿಲ್ಲವಾದರೆ ಯಾಕೆ ನಾಪತ್ತೆಯಾಗಿದ್ದ, ಆತ ಓಡಿ ಹೋಗಬಾರದಿತ್ತು.
`ಬೆಂಕಿ ರಾಜ’ ಅಂದರ್: ಬೆಂಗಳೂರಿನಲ್ಲಿ ಸಿಸಿಬಿ ಖೆಡ್ಡಾಕ್ಕೆ ಬಿದ್ದ ಸಂಪತ್ ರಾಜ್..!
ಆತ ತಪ್ಪು ಮಾಡಿದ್ದಾನೆ. ಯಾರೇ ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.
ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಇನ್ನಾದರೂ ನಮ್ಮ ಪರ ಇರಿ. ನನಗೆ ನ್ಯಾಯ ಕೊಡಿಸಿ ಎಂದು ಅಖಂಡ ಶ್ರೀನಿವಾಸ ಮೂರ್ತಿ ಮನವಿ ಮಾಡಿದ್ದಾರೆ.
ಇನ್ನು ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಂಪತ್ ರಾಜ್ ತಲೆಮರೆಸಿಕೊಂಡಿದ್ದರು.
ಸಂಪತ್ ಹಿಡಿಯೋಕೆ ಸಿಸಿಬಿ ಪೊಲೀಸರು ಹೈರಾಣಾಗಿದ್ದು, ಇದೀಗ ಬರೋಬ್ಬರಿ ತಿಂಗಳ ಬಳಿಕ ಸಂಪತ್ ರಾಜ್ ನನ್ನು ಅರೆಸ್ಟ್ ಮಾಡಲಾಗಿದೆ
ನಿನ್ನೆ ರಾತ್ರಿಯಿಡೀ ಪೊಲೀಸರು ಸಂಪತ್ ರಾಜ್ ನನ್ನು ಡ್ರಿಲ್ ಮಾಡಿದ್ದು, ಇಂದು ಮಧ್ಯಾಹ್ನದ ವೇಳೆ ಕೋರ್ಟ್ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










