ಇಂದು ಸಚಿವ ಸಂಪುಟ ಸಭೆ : ಏನೆಲ್ಲ ಚರ್ಚೆ ಆಗುತ್ತೆ..?
ಬೆಂಗಳೂರು : ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳುವ ಕಾರಣ ನಾಳೆ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ. ವಿಧಾನಸೌಧದಲ್ಲಿ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ಸಭೆ ನಡೆಯಲಿದೆ.
ಈ ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ದಿನಾಂಕ ನಿಗದಿ, 2021ನೇ ಸಾಲಿಗೆ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳನ್ನು ಘೋಷಿಸುವುದು ಸೇರಿದಂತೆ ಹಲವು ಮಹತ್ವದ ವಿಷಯಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ.
ಜೊತೆಗೆ ಬೆಳಗಾವಿ ನಗರದ ದಕ್ಷಿಣ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ತಯಾರಿಸಲಾದ 28.63 ಕೋಟಿ ರು.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಸಾಧ್ಯತೆಯಿದೆ.
ಹಾಗೆ ಬಳ್ಳಾರಿಯ ಹೊಸಪೇಟೆ ನಗರ ಸಭೆಯ ವ್ಯಾಪ್ತಿಯಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ 13.85 ಕೋಟಿ ರೂ ಆಡಳಿತಾತ್ಮಕ ಅನುಮೋದನೆ.
ಮತ್ತೆ ಗಡಿತಂಟೆ ಕೆಣಕಿದ ಮಹಾ ಡಿಸಿಎಂ: ಬೆಳಗಾವಿ, ಕಾರವಾರ ನಮ್ದು ಎಂದ ಅಜಿತ್ ಪವಾರ್..!
ಕರ್ನಾಟಕ ಕೃಷಿ ಸೇವೆಗಳು(ನೇಮಕಾತಿ) ನಿಯಮ 2020ಕ್ಕೆ ಅನುಮೋದನೆ ಹಾಗೂ ಕೃಷ್ಣ ಜಲಭಾಗ್ಯ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ,
ವಿಶ್ವೇಶ್ವರಯ್ಯ ಜಲ ನಿಗಮಗಳಿಗೆ ಒಟ್ಟು 1650 ಕೋಟಿ ರೂ ಸಾಲ ಸಂಗ್ರಹಿಸಲು ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಅಲ್ಲದೆ 2020-21ನೇ ಸಾಲಿಗೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಕ್ಕೆ ಐಇಬಿಆರ್ ಅಡಿ 500 ಕೋಟಿ ರೂ. ಹಣವನ್ನು ಅವಧಿ ಸಾಲಗಳ ಮೂಲಕ ಸಂಗ್ರಹಿಸಲು ಸರ್ಕಾರಿ ಖಾತರಿ ನೀಡಿ ಆದೇಶ ಹೊರಡಿಸುವ ಸಾಧ್ಯತೆ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









