lakshmi
ಲಾರೆನ್ಸ್ ಕೈಹಿಡಿದ ಬಾಲಿವುಡ್ “ಲಕ್ಷ್ಮೀ”..!
ನಟ ನಿರ್ದೇಶಕ ಲಾರೆನ್ಸ್ ಕಮಾಲ್ ಬಾಲಿವುಡ್ ನಲ್ಲೂ ಮುಂದುವರೆದಿದೆ. ಬಾಲಿವುಡ್ ನಲ್ಲಿ ಲಕ್ಷ್ಮೀ ಲಾರೆನ್ಸ್ ಕೈಹಿಡಿದಿದ್ದಾಳೆ.
ತಮಿಳಿನಲ್ಲಿ ಮುನಿ ಸಿನಿಮಾದ ನಂತರ ಬಂದ ಕಾಂಚನಾ ಸೀರೀಸ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಕಾಂಚನಾ , ಕಾಂಚನಾ 2, ಕಾಂಚನಾ3ಯಲ್ಲಿ ರಾಘವ ಲಾರೆನ್ಸ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಮಂಗಳಮುಖಿ ಪಾತ್ರದಲ್ಲಿ ಹಾರರ್ ಲುಕ್ ನಲ್ಲಿ ರಾಘವ್ ಲಾರೆನ್ಸ್ ಮಿಂಚಿದ್ದರು. ಇದೀಗ ಈ ಸಿನಿಮಾ ಬಾಲಿವುಡ್ ನಲ್ಲೂ ರೀಮೇಕ್ ಆಗಿ ಭಾರೀ ಸದ್ದು ಮಾಡ್ತಿದೆ. ಕೇವಲ ಬಾಲಿವುಡ್ ಅಂಗಳ ಅಷ್ಟೇ ಅಲ್ಲ. ದೇಶ ವಿದೇಶದಲ್ಲಿ ಕಮಾಲ್ ಮಾಡ್ತಿದೆ. ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಕೋಟಿಗಟ್ಟಲೆ ಹಣ ಬಾಚುತ್ತಿದೆ.
ಕೊರೊನಾದಿಂದ ಲಾಕ್ ಡೌನ್ ಆಗಿದ್ದ ಚಿತ್ರಮಂದಿರಗಳು ಇದೀಗ ರೀಓಪನ್ ಆಗಿದ್ರೂ ಯಾವ ಸ್ಟಾರ್ ನಟರ ಸಿನಿಮಾಗಳನ್ನ ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲು ಮೇಕರ್ಸ್ ಹಿಂದೇಟು ಹಾಕ್ತಿದ್ದಾರೆ. ಆದ್ರೆ ಭಾರತದಲ್ಲಿ ಅಲ್ಲದಿದ್ರು ವಿದೇಶಗಳಲ್ಲಿ ಚಿತ್ರಮಂದಿರಗಳಲ್ಲಿ ಲಕ್ಷ್ಮೀ ಸಿನಿಮಾ ಬಿಡುಗಡೆ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ತಿದೆ. ಕೋಟಿ ಕೋಟಿ ರೂಪಾಯಿ ಗಳಿಸಿದೆ. ಅಂದ್ಹಾಗೆ ಲಕ್ಷ್ಮೀ OTT ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿದೆ.
ಸೆಪ್ಟೆಂಬರ್ ನಲ್ಲಿ ಮದುವೆ, ನವೆಂಬರ್ ನಲ್ಲಿ ಪೂನಂ ಗರ್ಭಿಣಿಯಂತೆ..!
‘ಲಕ್ಷ್ಮಿ’ ಸಿನಿಮಾ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿ, ರಿಲೀಸ್ ದಿನವೇ ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಸಿನಿಮಾ ಎಂಬ ಖ್ಯಾತಿ ಗಳಿಸಿತ್ತು. ಫಿಜಿಯಲ್ಲಿ ಏಳು ಕಡೆ ಸಿನಿಮಾ ಪ್ರದರ್ಶನ ಕಾಣುತ್ತಿದ್ದು 3 ದಿನಕ್ಕೆ 17.16 ಲಕ್ಷ ಹಣ ಗಳಿಸಿದೆ.
ಆಸ್ಟ್ರೇಲಿಯಾದಲ್ಲಿ 52 ಕಡೆ ಸಿನಿಮಾ ಪ್ರದರ್ಶನವಾಗುತ್ತಿದ್ದು, ಇಲ್ಲಿ ಮೂರು ದಿನಕ್ಕೆ 72.48 ಲಕ್ಷ ಹಣ ಗಳಿಸಿದೆ. ಪಾಪಾ ನ್ಯೂ ಗಿನಿಯ ಒಂದು ಥಿಯೇಟರ್ನಲ್ಲಿ ಲಕ್ಷ್ಮಿ ಸಿನಿಮಾ ಬಿಡಗುಡೆ ಆಗಿದೆ. ಮೂರು ದಿನಕ್ಕೆ 18,538 ರೂ ಸಂಪಾದಿಸಿದೆ. ಇನ್ನೂ ನ್ಯೂಜಿಲೆಂಡ್ನಲ್ಲಿ 21 ಕಡೆಗಳಲ್ಲಿ ‘ಲಕ್ಷ್ಮಿ’ ಸಿನಿಮಾ ರಿಲೀಸ್ ಆಗಿದ್ದು, ಕೇವಲ ಮೂರೇ ಮೂರು ದಿನದಲ್ಲಿ 42.38 ಲಕ್ಷ ರೂಪಾಯಿ ಗಳಿಸಿದೆ.

ಅಂದ್ಹಾಗೆ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದು, ಕಿಯಾರಾ ನಾಯಕಿಯಾಗಿ ಮಿಂಚಿದ್ದಾರೆ. ವಿಶೇಷ ಅಂದ್ರೆ ಕಾಂಚನಾ ನಿರ್ದೇಶಿಸಿ ನಟಿಸಿದ್ದ ನಟ ರಾಘವ್ ಲಾರೆನ್ಸ್ ಅವರೇ ಬಾಲಿವುಡ್ ನ ಲಕ್ಷ್ಮೀ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅವರ ಸಾರಥ್ಯದಲ್ಲಿ ಮೂಡಿಬಂದ ಲಕ್ಷ್ಮೀ ಇದೀಗ ಸೂಪರ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ಈ ಮೂಲಕ ಬಾಲಿವುಡ್ ಅಂಗಳದಲ್ಲೂ ರಾಘವ್ ಅವರ ಜಾದೂ ವರ್ಕೌಟ್ ಆಗಿದೆ.
lakshmi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








