ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ : ಬಿ.ಸಿ.ಪಾಟೀಲ್ ಸಮರ್ಥನೆ
ಬೆಂಗಳೂರು ; ಬೆಳಗಾವಿಯಲ್ಲಿ ಎಲ್ಲೋ ಒಂದಿಷ್ಟು ಕಿಡಿಗೇಡಿಗಳು ಮಾಡಿದ ಕೆಲಸಕ್ಕಾಗಿ ಇಡೀ ಮರಾಠಿಗರನ್ನು ದೂರುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಕರ್ನಾಟಕದಲ್ಲಿಯೂ ಮರಾಠಿಗರಿದ್ದಾರೆ.
ಯಾರು ನಾಲ್ಕು ಕಿಡಿಗೇಡಿಗಳಿಗೋಸ್ಕರ ಇಡೀ ಸಮುದಾಯ ದೂರುವುದು ಸರಿಯಲ್ಲ. ಮರಾಠಿಗರಲ್ಲಿಯೂ ಕಡುಬಡವರಿದ್ದಾರೆ ಎಂದರು.
ಪಕ್ಷ ಬಲವರ್ಧನೆಗೆ ಡಿಕೆಶಿ ಪಣ : ನ.22 ರಿಂದ ಹೈದರಾಬಾದ್ ಕರ್ನಾಟಕ ಪ್ರವಾಸ
ಬೆಳಗಾವಿ ಕನ್ನಡಿಗರದ್ದೇ ಅದರಲ್ಲಿ ಎರಡನೇ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಮಹಾರಾಷ್ಟ್ರಕ್ಕೆ ಹೋಗಿವುದಿಲ್ಲ.
ಇದು ಕನ್ನಡಿಗರ ಸ್ವತ್ತು. ಮಹಾರಾಷ್ಟ್ರ ಡಿಸಿಎಂ ಹೇಳಿದರು ಎಂಬ ಕಾರಣಕ್ಕಾಗಿ ಇಡೀ ಸಮುದಾಯವನ್ನು ದೂಷಣೆ ಮಾಡುವುದು ತಪ್ಪು.
ಅಜಿತ್ ಪವಾರ್ ಬೆಳಗಾವಿ ಬೆಂಕಿ: ಉದ್ಧಟನ ಮಾಡಿದ್ರೆ ಸುಮ್ಮನಿರಲ್ಲ ಅಂದ್ರು ಬಿಎಸ್‍ವೈ
ಅವರು ವಿನಾಕಾರಣ ಕ್ಯಾತೆ ತಗೆದರೆ ನಾವು ಏಕೆತಲೆಕಡೆಸಿಕೊಳ್ಳಬೇಕು. ಆನೆ ನಡೆದದ್ದೆ ದಾರಿ ಎನ್ನುವ ನಮ್ಮ ದಾರಿಯಲ್ಲಿ ನಾವು ಹೋಗೋಣ.
ನಮ್ಮ ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಮಕ್ಕಳನ್ನು ನಮ್ಮ ಮುಖ್ಯಮಂತ್ರಿಗಳು ನಮ್ಮ ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









