james
ಪುನೀತ್ ‘ಜೇಮ್ಸ್’ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ
ಜೇಮ್ಸ್.. ಪ್ರಸ್ತುತ ಸಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ಮಿಂಚುತ್ತಿದ್ದಾರೆ. ವಿಶೇಷ ಅಂದ್ರೆ ರಾಜಕುಮಾರದಲ್ಲಿ ಅಪ್ಪು ಜೊತೆಗೆ ರೊಮ್ಯಾನ್ಸ್ ಮಾಡಿದ್ದ ಪ್ರಿಯಾ ಆನಂದ್ ಅವರು ಈ ಚಿತ್ರದಲ್ಲಿ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ತಾಯಿದ್ದಾರೆ. ಇದೀಗ ಸಿನಿಮಾಗೆ ಖ್ಯಾತ ಬಾಲಿವುಡ್ ನಟ ಎಂಟ್ರಿಯಾಗಿದ್ದಾರೆ.
ಹೌದು.. ಪವರ್ ಸ್ಟಾರ್ ಜೇಮ್ಸ್ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಶಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಬಹುಭಾಷಾ ನಟ ಮುಖೇಶ್ ರಿಷಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಈಗ ನಾಸಿರುದ್ದೀನ್ ಶಾ ಹೆಸರು ಸಹ ಕೇಳಿ ಬರುತ್ತಿದೆ. ಈಗಾಗಲೇ ಸಿನಿಮಾತಂಡ ನಾಸಿರುದ್ದೀನ್ ಶಾ ಜೊತೆ ಮಾತುಕತೆ ನಡೆಸಿದ್ದು, ಸಿನಿಮಾದಲ್ಲಿ ನಟಿಸಲು ನಾಸಿರುದ್ದೀನ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಸಹ ಹೇಳಲಾಗ್ತಿದೆ.
ಅಂದ್ಹಾಗೆ ನಾಸಿರುದ್ದೀನ್ ಶಾ ಅವರು ಈ ಹಿಂದೆ 2 ಕನ್ನಡ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಇದೀಗ 3ನೇ ಕನ್ನಡದ ಸಿನಿಮಾ ಜೇಮ್ಸ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ. ‘ತಬ್ಬಲಿಯು ನೀನಾದೆ ಮಗನೆ’ ಮತ್ತು ‘ಮನೆ’ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರನ್ನ ರಂಜಿಸಿದ್ದರು.
ಸೆಪ್ಟೆಂಬರ್ ನಲ್ಲಿ ಮದುವೆ, ನವೆಂಬರ್ ನಲ್ಲಿ ಪೂನಂ ಗರ್ಭಿಣಿಯಂತೆ..!
ಈ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳ್ತಾಯಿದ್ದಾರೆ. ಅಂದ್ಹಾಗೆ ಚೇತನ್ ಕುಮಾರ್ ಅವರು ಈಗಾಗಲೇ ಭರ್ಜರಿ, ಬಹದ್ಧೂರ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಅಪ್ಪು ಹಾಗೂ ಚೇತನ್ ಕಾಂಬಿನೇಷನ್ ನ ಈ ಸಿನಿಮಾ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡುತ್ತಿದ್ದಾರೆ. ಅನು ಪ್ರಭಾಕರ್, ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಇತ್ತೀಚಿಗಷ್ಟೆ ಉತ್ತರ ಕರ್ನಾಟಕ ಭಾಗಗಳಲ್ಲಿ ಚಿತ್ರೀಕರಣ ಮುಗಿದಿದೆ. ಶೂಟಿಂಗ್ ವೇಳೆ ಅಪ್ಪು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಲಾರೆನ್ಸ್ ಕೈಹಿಡಿದ ಬಾಲಿವುಡ್ “ಲಕ್ಷ್ಮೀ”..!
james
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








