ಮೊಟ್ಟೆಯ ಹೆಚ್ಚಿನ ಸೇವನೆಯಿಂದ ಮಧುಮೇಹ ಸಾಧ್ಯತೆ? excess egg consumption diabetes
ಲಂಡನ್, ನವೆಂಬರ್19: ಬೇಯಿಸಿದ ಮೊಟ್ಟೆಗಳು ವಿಶ್ವದ ಜನಪ್ರಿಯ ಉಪಾಹಾರವಾಗಿದೆ. ಆದರೆ, ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಹೊಸ ಸಂಶೋಧನೆಯು ಹೆಚ್ಚಿನ ಮೊಟ್ಟೆಯ ಸೇವನೆಯು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿ ಪ್ರಕಟಿಸಿದೆ. excess egg consumption diabetes

ಚೀನಾ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಕತಾರ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ನಡೆಸಲಾದ, ಅಧ್ಯಯನವು (1991 ರಿಂದ 2009 ರವರೆಗೆ) ಚೀನಾದ ವಯಸ್ಕರಲ್ಲಿ ಮೊಟ್ಟೆಯ ಹೆಚ್ಚಿನ ಸೇವನೆಯಿಂದ ಮಧುಮೇಹದ ಅಪಾಯವನ್ನು ತೋರಿಸಿದೆ.
ದಿನಕ್ಕೆ ಒಂದು ಅಥವಾ ಹೆಚ್ಚಿನ ಮೊಟ್ಟೆಗಳನ್ನು ನಿಯಮಿತವಾಗಿ ಸೇವಿಸುವ ಜನರಲ್ಲಿ ಮಧುಮೇಹದ ಅಪಾಯವು 60 ಪ್ರತಿಶತದಷ್ಟು ಹೆಚ್ಚಿದೆ ಎಂದು ಅದು ತಿಳಿಸಿದೆ.
ಚೀನಾದಲ್ಲಿ ಮಧುಮೇಹ ಹರಡುವಿಕೆಯು ಈಗ 11 ಪ್ರತಿಶತವನ್ನು ಮೀರಿದ್ದು, ಮಧುಮೇಹವು ಸಾರ್ವಜನಿಕ ಆರೋಗ್ಯದ ಗಂಭೀರ ಕಾಳಜಿಯಾಗಿದೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಯುನಿಸಾದ ಡಾ ಮಿಂಗ್ ಲಿ, ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಮೊಟ್ಟೆ ಸೇವನೆಯಿಂದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಿಶೇಷವಾಗಿ ಚೀನಾದಲ್ಲಿ ಸಾಂಪ್ರದಾಯಿಕ ಚೀನಾದ ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಡಾ ಲಿ ಹೇಳಿದ್ದಾರೆ.
ಡಿಸೆಂಬರ್ ವೇಳೆಗೆ ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯ 100 ಮಿಲಿಯನ್ ಡೋಸ್ ಉತ್ಪಾದನೆಗೆ ಎಸ್ಐಐ ಚಿಂತನೆ
ಕಳೆದ ಕೆಲವು ದಶಕಗಳಲ್ಲಿ ಚೀನಾವು ಸಾಕಷ್ಟು ಪೌಷ್ಟಿಕಾಂಶದ ಪರಿವರ್ತನೆಗೆ ಒಳಗಾಗಿದೆ. ಇದರಿಂದ ಅನೇಕ ಜನರು ಧಾನ್ಯಗಳು ಮತ್ತು ತರಕಾರಿಗಳನ್ನು ಒಳಗೊಂಡಿರುವ ಸಾಂಪ್ರದಾಯಿಕ ಆಹಾರದಿಂದ ದೂರವಿದ್ದು, ಹೆಚ್ಚು ಸಂಸ್ಕರಿಸಿದ ಆಹಾರಕ್ರಮ ಮತ್ತು ಹೆಚ್ಚಿನ ಪ್ರಮಾಣದ ಮಾಂಸದ ಆಹಾರವನ್ನು ಒಳಗೊಂಡಿದೆ. ಅದೇ ಸಮಯದಲ್ಲಿ ಮೊಟ್ಟೆಯ ಸೇವನೆಯು ಸಹ ಸ್ಥಿರವಾಗಿ ಹೆಚ್ಚುತ್ತಿದೆ.1991 ರಿಂದ 2009 ರವರೆಗೆ, ಚೀನಾದಲ್ಲಿ ಮೊಟ್ಟೆಗಳನ್ನು ತಿನ್ನುವವರ ಸಂಖ್ಯೆ ದ್ವಿಗುಣಗೊಂಡಿದೆ.
ಮೊಟ್ಟೆಗಳನ್ನು ತಿನ್ನುವುದು ಮತ್ತು ಮಧುಮೇಹ ನಡುವಿನ ಸಂಬಂಧವನ್ನು ಹೆಚ್ಚಾಗಿ ಚರ್ಚಿಸಲಾಗುತ್ತದೆಯಾದರೂ, ಈ ಅಧ್ಯಯನವು ಜನರ ದೀರ್ಘಕಾಲದ ಮೊಟ್ಟೆಯ ಸೇವನೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ನಿಂದ ಮಧುಮೇಹ ಬರುವ ಅಪಾಯವನ್ನು ನಿರ್ಣಯಿಸುವ ಗುರಿಯನ್ನು ಹೊಂದಿದೆ.

ನಾವು ಕಂಡುಹಿಡಿದ ಸಂಗತಿಯೆಂದರೆ, ಹೆಚ್ಚಿನ ದೀರ್ಘಕಾಲೀನ ಮೊಟ್ಟೆಯ ಸೇವನೆಯು (ದಿನಕ್ಕೆ 38 ಗ್ರಾಂ ಗಿಂತ ಹೆಚ್ಚು) ಚೀನಾದ ವಯಸ್ಕರಲ್ಲಿ ಮಧುಮೇಹದ ಅಪಾಯವನ್ನು ಸುಮಾರು 25 ಪ್ರತಿಶತದಷ್ಟು ಹೆಚ್ಚಿಸಿದೆ. ಇದಲ್ಲದೆ, ನಿಯಮಿತವಾಗಿ ಬಹಳಷ್ಟು ಮೊಟ್ಟೆಗಳನ್ನು ತಿನ್ನುವ ವಯಸ್ಕರಲ್ಲಿ (ದಿನಕ್ಕೆ 50 ಗ್ರಾಂ ಗಿಂತ ಹೆಚ್ಚು, ಅಥವಾ ಒಂದು ಮೊಟ್ಟೆಗೆ ಸಮಾನ) ಮಧುಮೇಹದ ಅಪಾಯವು 60 ಪ್ರತಿಶತದಷ್ಟು ಹೆಚ್ಚಿದೆ ಎಂದು ಡಾ ಲಿ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1329100082818367493?s=19
https://twitter.com/SaakshaTv/status/1329100517658619905?s=19








