Mask
ಇನ್ಮುಂದೆ ‘ಮಾಸ್ಕ್ ಧರಿಸದೇ’ ಓಡಾಡೋ ಮುನ್ನ ಎಚ್ಚರ.. ಎಚ್ಚರ..! ‘2 ಸಾವಿರ ರೂ’ ದಂಡ
ನವದೆಹಲಿ: ದೇಶಾದ್ಯಂತ ಕೊರೊನಾ ಹಾವಳಿ ಕಡಿಮೆಯಾಗ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಕೊರೊನಾ ಹಾವಳಿ ಹೆಚ್ಚಾಗ್ತಾಯಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅದ್ರಂತೆ ಈ ಹಿಂದೆ ವಿವಾಹಕ್ಕೆ 200 ಜನರಿಗೆ ಇದ್ದಂತ ಮಿತಿಯನ್ನು 50 ಜನರಿಗೆ ಇಳಿಸಿತ್ತು. ಇದೀಗ ಒಂದ್ ಹೆಜ್ಜೆ ಮುಂದಿಟ್ಟಿರುವ ಸರ್ಕಾರ ಮಾಸ್ಕ್ ಧರಿಸದ ಓಡಾಡೋರಿಗೆ ವಿಧಿಸಲಾಗಿದ್ದ 500ರೂ ದಂಡವನ್ನು ಇದೀಗ ಏಕಾಏಕಿ 2000ರೂಪಾಯಿಗಿ ಏರಿಕೆ ಮಾಡಿ ರಾಜ್ಯದ ಜನರಿಗೆ ಬಿಗ್ ಶಾಖ್ ನೀಡಿದೆ.
ಪತಿಯ 4ನೇ ಮದುವೆಗೆ ಮೂವರು ಪತ್ನಿಯರು ಸಾಥ್, ಆತ ಕೊಟ್ಟ ಕಾರಣ ಏನ್ ಗೊತ್ತಾ..?
ಹೌದು.. ಈ ಕುರಿತಂತೆ ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿ ನಿಭಾಯಿಸುವ ಕುರಿತಂತೆ ಸರ್ವ ಪಕ್ಷಗಳ ಸಭೆ ನಡೆಯಿತು. ಸಭೆಯಲ್ಲಿ ಈ ಮೊದಲಿದ್ದಂತ 500 ಮಾಸ್ಕ್ ಧರಿಸದೇ ಓಡಾಡೋರಿಗೆ ಹಾಕಲಾಗುತ್ತಿದ್ದಂತ ದಂಡವನ್ನು 2000ಕ್ಕೆ ಹೆಚ್ಚಳ ಮಾಡುವಂತ ತೀರ್ಮಾನವನ್ನು ಕೈಗೊಳ್ಳಲಾಗಿರುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
ಇನ್ನೂ ಈ ಹಿಂದೆ ಕರ್ನಾಟಕದಲ್ಲೂ 1000 ರೂಪಾಯಿ ದಂಡ ವಿಧಿಸಲಾಗಿತ್ತು. ಆದ್ರೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಮತ್ತೆ ರಾಜ್ಯ ಸರ್ಕಾರ ದಂಡದ ಪ್ರಮಾಣವನ್ನ ಮತ್ತೆ 100ಕ್ಕೆ ಇಳಿಸಿತ್ತು.
Mask
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








