ಕೊರೊನಾ ಹೆಚ್ಚಾದ್ರೆ ಕಾಲೇಜು ಬಂದ್ : ಕೆ. ಸುಧಾಕರ್
ಧಾರವಾಡ : ಕಾಲೇಜು ಆರಂಭವಾದ ದಿನದಿಂದ 120 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಕೋವಿಡ್ 19 ಕೇಸ್ ಗಳು ಹೆಚ್ಚಾದರೆ ಕಾಲೇಜುಗಳನ್ನು ಬಂದ್ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಹಾಗೂ ಕೊರೊನಾ ಮಧ್ಯೆ ಕಾಲೇಜು ಆರಂಭದ ಬಗ್ಗೆ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಸುಧಾಕರ್, ದಿಲ್ಲಿ ಮತ್ತು ಅಹಮದಾಬಾದ್ ನಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ.
ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ.
ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾದರೆ ಕಾಲೇಜುಗಳನ್ನು ಬಂದ್ ಮಾಡಿಸಲಾಗುವುದು ಎಂದು ತಿಳಿಸಿದರು.
ಬಿಎಸ್‍ವೈಗೆ ಮತ್ತೆ ಕೈಕೊಟ್ರಾ ಹೈಕಮಾಂಡ್: ಸಂಪುಟ ವಿಸ್ತರಣೆ ಆಸೆಗೆ ಎಳ್ಳುನೀರು..!
ಇನ್ನು ರಾಜ್ಯದಲ್ಲಿ ಜನರು ಕೊರೊನಾ ಹೋಗಿದೆ ಎಂಬ ಭಾವನೆಯಲಿದ್ದಾರೆ. ಲಸಿಕೆ ಬರುವವರೆಗೆ ಜನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ ಎರಡನೇ ಬಾರಿಗೆ ಕೋವಿಡ್ 19 ಬರುವುದು ಕಡಿಮೆಯಾಗುತ್ತದೆ.
ಕೊರೊನಾ ಎರಡನೇ ಅಲೆ ವ್ಯಕ್ತಿಗೆ 45 ದಿನದಿಂದ 2 ತಿಂಗಳ ಬಳಿಕ ಬರಲಿದೆ. ಅದು ಜನರ ನಡವಳಿಕೆಯನ್ನು ಅವಲಂಬಿಸಿರುತ್ತದೆ ಎಂದರು.
ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ನಾಳೆ ಬೃಹತ್ ಪ್ರತಿಭಟನೆ
ಯುವ ಜನತೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿರುವುದರಿಂದ ಕಾಲೇಜುಗಳನ್ನು ಆರಂಭಿಸಿದ್ದೇವೆ.
ಒಂದು ವೇಳೆ ರಾಜ್ಯದಲ್ಲಿ ಸೋಂಕು ಹೆಚ್ಚಳವಾದರೆ ಕಾಲೇಜುಗಳನ್ನು ಬಂದ್ ಮಾಡುತ್ತೇವೆ ಎಂದು ಸುಧಾಕರ್ ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










