ಬಿಜೆಪಿ ಮೇಲೆ ಗೂಬೆ ಕೂರಿಸೋದು ಬಿಡಿ : ಡಿಕೆಶಿಗೆ ಮುನಿಸ್ವಾಮಿ ಟಾಂಗ್
ಕೋಲಾರ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ತಮ್ಮ ಪಕ್ಷದವರನ್ನು ಸರಿ ಮಾಡಿಕೊಳ್ಳಲಿ ಎಂದು ಕೋಲಾರ ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ.
ಬಿಜೆಪಿಯವರು ನನ್ನನ್ನು ಕಟ್ಟಿಹಾಕಲು ಸಿಬಿಐ ಯಿಂದ ಇಂತಹ ಕೆಲಸ ಮಾಡಿಸುತ್ತಿದ್ದಾರೆ ಎಂದು ಸಿಬಿಐ ನೋಟಿಸ್ ನೀಡಿದ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದರು.
ಈ ಬಗ್ಗೆ ಕೋಲಾರದಲ್ಲಿ ಮಾತನಾಡಿರುವ ಮುನಿಸ್ವಾಮಿ, ಸ್ವಪಕ್ಷೀಯರಾದ ಸಿದ್ದರಾಮಯ್ಯ ಅವರೇ ಡಿ.ಕೆ.ಶಿವಕುಮಾರ್ ಕಾಲು ಎಳೆಯುತ್ತಿದ್ದಾರೆ.
ವಿರೋಧ ಪಕ್ಷದ ವಿರುದ್ಧ ಮಾತನಾಡದೆ, ತಮ್ಮ ಪಕ್ಷದವರನ್ನು ಮೊದಲು ಸರಿ ಮಾಡಿಕೊಳ್ಳಲಿ.
ಸಿಬಿಐ ಸಮನ್ಸ್ | ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನ : ಡಿಕೆಶಿ
ಡಿ.ಕೆ.ಶಿವಕುಮಾರ್ ಅವರಿಗೆ ಆರೋಪ ಮಾಡುವುದಕ್ಕೆ ಏನೂ ಇಲ್ಲ, ಪ್ರತಿ ಬಾರಿ ಸಿಬಿಐ ನೋಟಿಸ್ ಕೊಟ್ಟಾಗಲೂ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಾರೆ.
ತಪ್ಪು ಮಾಡಿಲ್ಲವೆಂದರೆ ಭಯವೇಕೆ..? ದಾಖಲಾತಿಗಳು ನೀಡಿ ಹೊರಬರಲಿ ಎಂದು ಮುನಿಸ್ವಾಮಿ ಟೀಕಿಸಿದರು.
ಇನ್ನು ಸಿಬಿಐ ಉಪಚುನಾವಣೆಗಳು ನೋಡಿಕೊಂಡು ನೋಟೀಸ್ ನೀಡುತ್ತಿಲ್ಲ.
ಅವರ ಮೇಲೆ ಆರೋಪ ಇರುವುದರಿಂದ ಸಿಬಿಐ ನೋಟೀಸ್ ನೀಡಿದೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










